Advertisement
ಕಾರ್ಯಕ್ರಮಗಳು

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ, ಮೂರುಕಜೆ ಮೈತ್ರೇಯೀ ಗುರುಕುಲಕ್ಕೆ ಯೋಗ ಗುರು ಬಾಬಾರಾಮ್ ದೇವ್ ಭೇಟಿ

Share

ಬಂಟ್ವಾಳ: ಪತಂಜಲಿ ಯೋಗ ಪೀಠದ ಅಂತರಾಷ್ಟ್ರೀಯ ಯೋಗಗುರು ಬಾಬಾ ರಾಮ್‍ದೇವ್ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಮತ್ತು ವಿಟ್ಲಪಡ್ನೂರು ಗ್ರಾಮದ ಮೂರುಕಜೆ ಮೈತ್ರೇಯೀ ಗುರುಕುಲಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು.

Advertisement
Advertisement
Advertisement
Advertisement

ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ಅವರು ಮನುಷ್ಯನ ಜೀವನ ಬೀಜವಿದ್ದಂತೆ. ನಮ್ಮೊಳಗೆ ಒಳ್ಳೆದು ಕೆಟ್ಟದು ಎರಡೂ ಇದೆ. ನಾವು ಜೀವನದಲ್ಲಿ ಉತ್ತಮವಾದ ಬೀಜವನ್ನೇ ಬಿತ್ತಬೇಕು, ಕೆಟ್ಟದ್ದನ್ನು ನಾಶ ಮಾಡಬೇಕು ಅದುವೇ ಜೀವನದ ಪುರುಷಾರ್ಥ ಎಂದು ಹೇಳಿದರು. ನಾವು ಮಾಡುವ ಕೆಲಸವನ್ನು ನಿಷ್ಠೆಯಿಂದ, ಅತ್ಯುತ್ತಮವಾಗಿ ಮಾಡಬೇಕು. ಆಗ ರಾಷ್ಟ್ರ ಮಾತ್ರವಲ್ಲ, ವಿಶ್ವವೇ ನಮಗೆ ಗೌರವ ನೀಡುತ್ತದೆ. ಮನುಷ್ಯ ಜೀವನದಲ್ಲಿ ಕರ್ಮ ಆಧಾರಿತ, ಧರ್ಮ ಆಧಾರಿತ ವ್ಯವಸ್ಥೆಗಳಿವೆ. ಕರ್ಮಾಧಾರಿತದಿಂದ ಕಲಸ ಮಾಡಿದಾಗ ಖುಷಿ ಸಿಗುತ್ತದೆ ಎಂದರು. ದೇಶದಲ್ಲಿ ಸತ್ಯ,ನ್ಯಾಯ ,ರಾಮ ಮಾರ್ಗದಲ್ಲಿ ನಡೆದರೆ ಮಾತ್ರ ಬಲಿಷ್ಠ ದೇಶ ಮತ್ತು ಗೌರವ ಸಮಾಜ ನಿರ್ಮಾಣವಾಗಲಿದೆ ಎಂದ ಅವರು ಭಾರತ ಅತೀ ಶೀಘ್ರದಲ್ಲೇ ವಿಶ್ವಗುರುವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

 

ಸ್ವದೇಶಿ ಅಭಿಯಾನ ಆರಂಭಿಸಲು ಪ್ರೇರಣೆ ಏನು ಎನ್ನುವ ವಿದ್ಯಾರ್ಥಿನಿ ಅಮೃತಳ ಪ್ರಶ್ನೆಗೆ ಉತ್ತರಿಸಿದ ರಾಮ್‍ದೇವ್ ಈ ಹಿಂದೆ 15 ಲಕ್ಷ ಕೋಟಿ ರೂಪಾಯಿ ಹಾಣ ವಿಧೇಶಿ ಕಂಪೆನಿಗಳು ಹೋಗುತ್ತಿತ್ತು. ಭಾರತದ ಸಾಂಸ್ಕೃತಿಕತೆ , ವೈಚಾರಿಕತೆ ಲೂಟಿಯಾಗುತ್ತಿತ್ತು. ಇದನ್ನು ತಡೆಯಲು ಏನಾದರೂ ಮಾಡಬೇಕು ಎಂದು ಕೊಂಡಿದ್ದೆ. ಕೇವಲ 500 ರೂ.ವಿನಲ್ಲಿ ಆರಂಭಗೊಂಡ ಪತಂಜಲಿ ಉತ್ತನ್ನಗಳು ಇಂದು 10 ಸಾವಿರ ಕೋಟಿ ಆದಾಯವನ್ನು ಪಡೆಯುವತ್ತ ಮುಂದುವರೆದಿದೆ ಎಂದರು.

Advertisement

ಈ ಸಂದರ್ಭ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತಮಾಧವ, ಸಹಸಂಚಾಲಕ ರಮೇಶ್, ರಾಷ್ಟ್ರ ಸೇವಿಕಾ ಸಮಿತಿಯ ಡಾ. ಕಮಲಾ ಪ್ರಭಾಕರಭಟ್, ಪತಂಜಲಿ ಯೋಗ ಪೀಠದ ಭವರ್‍ಲಾಲ್ ಆರ್ಯ, ಜಿಲ್ಲಾ ಪ್ರಮುಖರಾದ ರಾಜೆಂದ್ರ, ಸುಜಾತ ಮಂಗಳೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್‍ಕಟ್ಟೆ ಸ್ವಾಗತಿಸಿ, ವಂದಿಸಿದರು. ಶಿಶುಮಂದಿರದಿಂದ ಕಾಲೇಜುವರೆಗಿನ ಮಕ್ಕಳ ಚಟುವಟಿಕೆ, ಶಿಸ್ತು ಕಂಡು ಸಂತಸ ವ್ಯಕ್ತಪಡಿಸಿದರು. ಗೋಶಾಲೆಯಲ್ಲಿ ಗೋವಿಗೆ ಬಾಳೆಹಣ್ಣು, ಧವಸಧಾನ್ಯವನ್ನು ನೀಡಿದರು.

Advertisement

ಮೈತ್ರೇಯಿ ಗುರುಕುಲ:
ವಿಟ್ಲ: ಜೀವನ ಪ್ರದರ್ಶನಕ್ಕಾಗಿ ಅಲ್ಲ, ಪ್ರಭುದರ್ಶನಕ್ಕಾಗಿ ಎಂಬ ಭಾವ ನಮ್ಮಲ್ಲಿ ಮೂಡಬೇಕು. ಗುರುಕುಲಗಳು ಸಂಪೂರ್ಣ ಶಿಕ್ಷಣ ನೀಡುವ ವಿಶ್ವವಿದ್ಯಾನಿಲಯ. ಬೌದ್ಧಿಕ ವಿಕಾಸದೊಂದಿಗೆ ಶರೀರ, ಮನಸ್ಸು, ಬುದ್ಧಿ, ಆತ್ಮದ ವಿಕಾಸವಾಗಬೇಕು. ಸಂಸ್ಕೃತ ವ್ಯಾಕರಣದ ಮೂಲ ಗ್ರಂಥ ಅಭ್ಯಸಿಸುವ ಮೂಲಕ ಅಷ್ಟಾಧ್ಯಾಯೀ ಆಗಬೇಕು ಎಂದು ವಿಟ್ಲಪಡ್ನೂರು ಗ್ರಾಮದ ಮೂರುಕಜೆ ಮೈತ್ರೇಯೀ ಗುರುಕುಲಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿಯರ ಜತೆ ಸಂವಾದ ನಡೆಸಿದ ಬಾಬಾ ರಾಮ್‍ದೇವ್ ಹೇಳಿದರು.

Advertisement

ಯೋಗದ ಮೂಲಕ ಶರೀರ ಬಲ ವೃದ್ಧಿ ಮಾಡಲು ಸಾಧ್ಯವಿದೆ. ನಿತ್ಯದ ಚಟುವಟಿಕೆಗಳ ನಡುವೆ ಯೋಗಾಸನಕ್ಕಾಗಿ ಒಂದು ಗಂಟೆಯನ್ನು ಮೀಸಲುಗೊಳಿಸಬೇಕು ತಿಳಿಸಿದರು.
ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ, ಮೈತ್ರೇಯೀ ಗುರುಕುಲದ ಗೌರವಾಧ್ಯಕ್ಷ ಎನ್. ಕುಮಾರ್, ಅಜೇಯ ವಿಶ್ವಸ್ಥ ಮಂಡಳಿ ಸದಸ್ಯ ಪಿ. ರವೀಂದ್ರ, ಸೀತಾರಾಮ ಕೆದಿಲಾಯ ಮತ್ತಿತರರು ಉಪಸ್ಥಿತರಿದ್ದರು. ಮಾತೃಶ್ರೀ ಶೃತಿ ಸ್ವಾಗತಿಸಿ, ನಿರೂಪಿಸಿದರು. ಅನಂತ ಶರ್ಮ ವಂದಿಸಿದರು. ಸಿಂಚನ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ಬಾಬಾ ರಾಮ್ ದೇವ್ ಅವರು ಆಗಮಿಸುತ್ತಿದ್ದಂತೆ ಅವರಿಗೆ ವೇದ ಘೋಷಗಳ ಜತೆಗೆ ಪೂರ್ಣಕುಂಬ ಸ್ವಾಗತವನ್ನು ನೀಡಲಾಯಿತು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಯುವಕರಲ್ಲಿ ಹೆಚ್ಚುತ್ತಿರುವ ಸ್ಥೂಲ ಕಾಯ | ಮನ್ ಕಿ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಳವಳ

ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…

19 mins ago

ತುಮಕೂರು ಜಿಲ್ಲೆಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…

23 mins ago

ಹವಾಮಾನ ವರದಿ | 24-02-2023 | ಫೆ.28 ರಂದು ಅಲ್ಲಲ್ಲಿ ಮಳೆಯ ಸಾಧ್ಯತೆ ಇದೆ |

ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.

29 mins ago

ಹವಾಮಾನ ವರದಿ | 23-02-2024 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |

ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…

1 day ago

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |

ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…

3 days ago

ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!

ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.

4 days ago