ಜಾಗತಿಕ ಕೋಕೋ ಬೆಲೆಗಳು ಒಂದು ವರ್ಷದ ಅವಧಿಯಲ್ಲಿ ಅರ್ಧದಷ್ಟು ಕುಸಿದಿರುವ ಹಿನ್ನೆಲೆಯಲ್ಲಿ ಪಶ್ಚಿಮ ಆಫ್ರಿಕಾದ ರಾಷ್ಟ್ರವಾದ ಘಾನಾ ತನ್ನ ರೈತರಿಗೆ ನೀಡುವ ಮೂಲ ಧಾರಣೆಯಲ್ಲಿ ಕೋಕೋ ದರವನ್ನು ಕಡಿತಗೊಳಿಸಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಮೆಟ್ರಿಕ್ ಟನ್‌ಗೆ ಸುಮಾರು $4,000 ಮಟ್ಟಕ್ಕೆ ಬೆಲೆ ಇಳಿದಿರುವುದರಿಂದ, ಹೆಚ್ಚಿನ ಬೇಡಿಕೆಯನ್ನು ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಘಾನಾ ವಿಶ್ವದ ಎರಡನೇ ಅತಿದೊಡ್ಡ ಕೋಕೋ ಉತ್ಪಾದಕ ರಾಷ್ಟ್ರವಾಗಿದೆ.
ಘಾನಾ ಕೊಕೋ ಬೋರ್ಡ್ ಈ ಹಿಂದೆ ನಿಗದಿಪಡಿಸಿದ್ದ ರೈತರ ಮೂಲ ಧಾರಣೆ ದರ ಪ್ರತಿ ಟನ್‌ಗೆ ಸುಮಾರು $5,300 ಆಗಿತ್ತು. ಈ ಬಾರಿ ಈ ದರವನ್ನು $3,580 ಪ್ರತಿ ಮೆಟ್ರಿಕ್ ಟನ್‌ಗೆ ಇಳಿಸಲಾಗಿದೆ. ಕೋಕೋ ಬೇಡಿಕೆ ಕುಸಿದಿರುವುದರಿಂದ ರೈತರಿಗೆ ಹಣ ಪಾವತಿಸುವುದು ಅನೇಕರಿಗೆ ಕಷ್ಟವಾಗಿದೆ. ಪಾವತಿ ವಿಳಂಬದ ಪರಿಣಾಮವಾಗಿ ಸಾವಿರಾರು ರೈತರು ಕೃಷಿ ನಿರ್ವಹಣೆ ಸೇರಿದಂತೆ ಇತರ ಸಮಸ್ಯೆಗಳಿಂದ ಪರದಾಡಿದ್ದಾರೆ. ಮಾರಾಟವಾಗದ ಕೋಕೋ ಬೀನ್ಸ್‌ಗಳು ತೋಟಗಳಲ್ಲಿ ರಾಶಿಯಾಗಿ ಬಿದ್ದಿರುವುದಾಗಿ ವರದಿಯಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಅಧಿಕಾರಿಗಳ ಪ್ರಕಾರ, ಪರಿಣಾಮಕ್ಕೊಳಗಾದ ಎಲ್ಲಾ ಕೋಕೋ ರೈತರಿಗೆ ತಕ್ಷಣ ಮರುಪಾವತಿಯನ್ನು ಪ್ರಾರಂಭಿಸಲು ಸರ್ಕಾರವು ಕೊಕೋ ಬೋರ್ಡ್ ಗೆ ನಿರ್ದೇಶನ ನೀಡಿದೆ. ಜಾಗತಿಕ ಕೋಕೋ ಮಾರುಕಟ್ಟೆಯ ಚಲನೆ ಘಾನಾ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ನೀತಿ ನಿರ್ಣಯಗಳು ಸಾಧ್ಯತೆ ಇದೆ.
ಉತ್ತರ ಭಾರತದ ಶುಷ್ಕ ಗಾಳಿ ಹಾಗೂ ಪೆಸಿಫಿಕ್ ಸಾಗರದ ಪ್ರಬಲ ಚಂಡಮಾರುತಗಳ ಪರಿಣಾಮ…
ಹೊಸ ಅಡಿಕೆಯ ಆರಂಭಿಕ ಧಾರಣೆ ₹330–350ಕ್ಕೆ ನಿಗದಿಯಾಗಿದ್ದು, ಆಮದು ಅಡಿಕೆಗೆ ಇರುವ ₹351ರ…
ಪದವಿ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿವೇತನಕ್ಕೆ…
ಕರ್ನಾಟಕದಲ್ಲಿ ಬೀಜದಿಂದ ಗ್ರಾಹಕರ ತಟ್ಟೆಯವರೆಗೆ ಕೃಷಿ ಉತ್ಪನ್ನದ ಪಯಣವನ್ನು ಪತ್ತೆಹಚ್ಚಲು AI ಆಧಾರಿತ…
ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಒಂದೇ ದಿನ 4 ಚಿನ್ನ ಸೇರಿದಂತೆ 7 ಪದಕ…
ಅಸ್ಸಾಂನಲ್ಲಿ 5.74 ಟನ್ ಅಡಿಕೆ ವಶ, ಕೇರಳದಲ್ಲಿ 380 ಚೀಲ ಅಡಿಕೆ ಬಿಡುಗಡೆಗೆ…