Advertisement
MIRROR FOCUS

ಗೋವಾದಲ್ಲಿ ಗೇರು ಕೃಷಿಗೆ ಕೋತಿಗಳ ಉಪಟಳ | ಕರಾವಳಿ ಕರ್ನಾಟಕದ ಗೇರು ಕೃಷಿಗೆ ಮುನ್ನೆಚ್ಚರಿಕೆಯ ಸಂದೇಶ ?

Share

ಗೋವಾದ ಸತ್ತಾರಿ ತಾಲೂಕಿನಲ್ಲಿ ಗೇರು ತೋಟಗಳ ಮೇಲೆ ಕಪಿಗಳ ದಾಳಿ ಆರಂಭವಾಗಿರುವುದು, ಕೇವಲ ಸ್ಥಳೀಯ ಸಮಸ್ಯೆಯಷ್ಟೇ ಅಲ್ಲ, ಇದು ಕರಾವಳಿ ಕರ್ನಾಟಕದ ಗೇರು ಕೃಷಿಗೂ ಮುನ್ನೆಚ್ಚರಿಕೆಯ ಸಂಕೇತವೆಂದು ಕೃಷಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ಕಾಡಂಚಿನ ಪ್ರದೇಶದಲ್ಲಿ ಗೇರು ಕೃಷಿಗೂ ಕೋತಿಗಳ ಹಾವಳಿ ಆರಂಭವಾಗಿದೆ. ಇದು ಗಂಭೀರ ಸ್ವರೂಪಕ್ಕೆ ಹೋಗುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ.

ಗೋವಾದಲ್ಲಿ ಗೇರು ಬೆಳೆ ಇದುವರೆಗೂ ಕೋತಿಗಳ ದಾಳಿಯಿಂದ ಬಹುತೇಕ ಸುರಕ್ಷಿತವಾಗಿದ್ದ ನಗದು ಬೆಳೆ ಎನ್ನಲಾಗುತ್ತಿತ್ತು. ಆದರೆ ಗೋವಾದಲ್ಲಿ ಕೂಡಾ ಕಂಡುಬಂದಿರುವ ಇತ್ತೀಚಿನ ಬೆಳವಣಿಗೆಯಲ್ಲಿ ಕೋತಿಗಳ ಆಹಾರ ಅಭ್ಯಾಸದಲ್ಲಿ ಬದಲಾವಣೆ ಸಂಭವಿಸುತ್ತಿರುವುದನ್ನು ಸೂಚಿಸುತ್ತದೆ. ಇದು ಭವಿಷ್ಯದಲ್ಲಿ ಕರ್ನಾಟಕದ ಕರಾವಳಿ ಜಿಲ್ಲೆಗಳಿಗೂ ವಿಸ್ತರಿಸುವ ಸಾಧ್ಯತೆಯನ್ನು ತಳ್ಳಿ ಹಾಕಲು ಸಾಧ್ಯವಿಲ್ಲ.

ಕರ್ನಾಟಕದ ಕರಾವಳಿ ಭಾಗಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗೇರು ಕೃಷಿ ಸಾವಿರಾರು ರೈತರ ಆದಾಯದ ಮೂಲವಾಗಿದೆ. ಅಡಿಕೆ ಬೆಳೆ ಇಲ್ಲಿನ ಗ್ರಾಮೀಣ ಆರ್ಥಿಕತೆಯೊಂದಿಗೆ ನೇರವಾಗಿ ಜೋಡಣೆಗೊಂಡಿದೆ.  ಇತ್ತೀಚಿನ ವರ್ಷಗಳಲ್ಲಿ ಹವಾಮಾನ ಬದಲಾವಣೆ, ಮಾರುಕಟ್ಟೆ ಅಸ್ಥಿರತೆ ಹಾಗೂ ಕಾರ್ಮಿಕ ಕೊರತೆಯಿಂದಾಗಿ ಗೇರು ರೈತರು ಈಗಾಗಲೇ ಒತ್ತಡದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಕಾಡು ಪ್ರಾಣಿಗಳ ಉಪಟಳವೂ ಸೇರಿಕೊಂಡರೆ, ಕೃಷಿ ಆರ್ಥಿಕತೆಯ ಮೇಲೆ  ಪರಿಣಾಮ ಬೀರುವ ಸಾಧ್ಯತೆ ಇದೆ.

“ಗೇರು ಬೆಳೆ ಇದುವರೆಗೂ ಕೋತಿಗಳ ದಾಳಿಯಿಂದ ಸುರಕ್ಷಿತವಾಗಿತ್ತು. ಆದರೆ ಈಗ ಕಾಣುತ್ತಿರುವ ಪ್ರವೃತ್ತಿ ಮುಂದಿನ ದಿನಗಳಲ್ಲಿ ರೈತರ ಆದಾಯದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಇದು ಕೇವಲ ವನ್ಯಜೀವಿ ಸಮಸ್ಯೆಯಲ್ಲ, ಗ್ರಾಮೀಣ ಆರ್ಥಿಕತೆಗೆ ಸಂಬಂಧಿಸಿದ ಗಂಭೀರ ವಿಷಯವಾಗಿದೆ.”

ಗೋವಾದ ಕೃಷಿಕರ ಅನುಭವದಂತೆ, ಕೋತಿಗಳು ಗೇರು ಹಣ್ಣು ಗುಚ್ಛಗಳನ್ನು ಹಾನಿಗೊಳಿಸಿ, ರಸವನ್ನು ಕುಡಿಯುವ ಮೂಲಕ ಬೀಜಗಳನ್ನು ಕೆಳಗೆ ಎಸೆಯುತ್ತಿವೆ. ಇದು ನೇರ ಉತ್ಪಾದನಾ ನಷ್ಟಕ್ಕೆ ಕಾರಣವಾಗುತ್ತಿದೆ.  ಕರಾವಳಿ ಕರ್ನಾಟಕದಲ್ಲೂ ಅರಣ್ಯ ಪ್ರದೇಶಗಳಿಗೆ ಸಮೀಪದ ತೋಟಗಳಲ್ಲಿ ಇದೇ ರೀತಿಯ ಅಪಾಯವೂ ಕೆಲವು ಕಡೆ ಇದೆ. ಆದರೆ ಇನ್ನಷ್ಟು ಅಪಾಯವಾಗುವ ಹಾಗೂ ಆರ್ಥಿಕ ನಷ್ಟವಾಗುವ ಸಾಧ್ಯತೆ ಇದೆ ಎಂಬುದು ಕೃಷಿ ತಜ್ಞರ ಅಭಿಪ್ರಾಯ.

ಕೃಷಿ ತಜ್ಞರ ಪ್ರಕಾರ, ಕಾಡು ಪ್ರಾಣಿ ನಿರ್ವಹಣೆಗೆ ಸಂಬಂಧಿಸಿದ ಪೂರ್ವತಯಾರಿ ಯೋಜನೆಗಳು, ಅರಣ್ಯ ಇಲಾಖೆ–ಕೃಷಿ ಇಲಾಖೆ ನಡುವಿನ ಸಮನ್ವಯ ಕ್ರಮಗಳು, ರೈತರಿಗೆ ಜಾಗೃತಿ ಮತ್ತು ತಾಂತ್ರಿಕ ಮಾರ್ಗದರ್ಶನವನ್ನು  ಈಗಲೇ ಕೈಗೊಳ್ಳುವುದು ಅನಿವಾರ್ಯವಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಗೋವಾದಲ್ಲಿ ಆರಂಭವಾದ ಈ ಸಮಸ್ಯೆಯನ್ನು ಕರ್ನಾಟಕದಲ್ಲಿ ನಿರ್ಲಕ್ಷ್ಯ ಮಾಡಿದರೆ, ಮುಂದಿನ ದಿನಗಳಲ್ಲಿ ಗೇರು ಬೆಳೆಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.  ಹೀಗಾಗಿ ಮುನ್ನೆಚ್ಚರಿಕೆ ಮತ್ತು ಸಮಗ್ರ ನೀತಿ ರೂಪಿಸುವುದು ಅಗತ್ಯವಾಗಿದೆ.

Monkey attacks on cashew plantations in Goa’s Sattari taluk have raised concerns among agricultural experts, who warn that coastal Karnataka could face similar threats. Cashew farming is a major income source for farmers in Dakshina Kannada, Udupi, and Uttara Kannada. Experts stress the need for early preventive measures, coordinated wildlife management, and farmer awareness to avoid future economic losses.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್

the rural mirror news

Published by
ಮಿರರ್‌ ಡೆಸ್ಕ್

Recent Posts

ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಯ ಭಯದಲ್ಲಿ ಕೇರಳದ ರಬ್ಬರ್ ರೈತರು – ತೋಟಗಾರಿಕೆಗೆ ಮುಂದೆ ಏನು?

ಪಶ್ಚಿಮ ಘಟ್ಟದ ESA ಪ್ರಸ್ತಾವನೆ ಮತ್ತೆ ಕೇರಳದ ರಬ್ಬರ್ ಹಾಗೂ ಇತರ ತೋಟಗಾರಿಕಾ…

8 hours ago

ಫ್ಲೈಓವರ್ ಬಳಿಕ ಕಲ್ಲಡ್ಕದಲ್ಲಿ ಏನು ಬದಲಾವಣೆಯಾಗಿದೆ..?

ಕಲ್ಲಡ್ಕದ 2.1 ಕಿ.ಮೀ. ಉದ್ದದ ಫ್ಲೈಓವರ್ ಸಂಚಾರಕ್ಕೆ ಮುಕ್ತವಾದ ಬಳಿಕ ಪೇಟೆಯೊಳಗಿನ ವಾಹನ…

16 hours ago

ಹಲಸಿನಂತೆಯೇ ಕಾಣುವ ಈ ಹಣ್ಣು ನಿಮಗೆ ಗೊತ್ತೇ?

ಹಲಸಿನ ಹಣ್ಣಿನಂತೆ ಕಾಣುವ ಚೆಂಪೆಡಕ್ ಹಣ್ಣು ರುಚಿ ಮತ್ತು ಸುವಾಸನೆಯ ಜತೆಗೆ ವಿಟಮಿನ್‌…

17 hours ago

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಹಿಳೆಯರ ಓಟಕ್ಕೆ ಚಿನ್ನದ ಹೊಳಪು – 4×400 ಮೀ. ರಿಲೇಯಲ್ಲಿ ಭರ್ಜರಿ ಗೆಲುವು

ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಭಾರತ 3:29.69 ಸಮಯದೊಂದಿಗೆ ಚಿನ್ನ…

17 hours ago

ಕಾಳುಮೆಣಸು ಮಾರುಕಟ್ಟೆಯಲ್ಲಿ ಏನಾಗುತ್ತಿದೆ?

ಆಗಮನ ಕಡಿಮೆಯಾಗಿದ್ದರೂ ದೇಶದ ಕಾಳುಮೆಣಸು ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ದಾಸ್ತಾನು ಮತ್ತು ಬೇಡಿಕೆ…

1 day ago

ಹವಾಮಾನ ವರದಿ | 29-09-2026 | ಅ.6 ರವರೆಗೆ ಹಲವು ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ

ಅರಬ್ಬಿ ಸಮುದ್ರದ ಗಾಳಿಯು ಶ್ರೀಲಂಕಾ ಹಾಗೂ ತಮಿಳುನಾಡು ಕರಾವಳಿ ಮೂಲಕ ರಾಜ್ಯಕ್ಕೆ ಪ್ರವೇಶಿಸುತ್ತಿರುವ…

1 day ago