ಪೆರ್ಲ: ಕೇರಳದ ನೆರೆ ಸಂತ್ರಸ್ತರಿಗೆ ನಿತ್ಯೋಪಯೋಗಿ ವಸ್ತುಗಳನ್ನು ಒದಗಿಸುವ ಉದ್ದೇಶದೊಂದಿಗೆ ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ಪೆರ್ಲ ಪೇಟೆಯಲ್ಲಿ ನೆರೆ ಪರಿಹಾರ ನಿಧಿ ಸಂಗ್ರಹಿಸಲಾಯಿತು.
ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ ಎಂ. ಮಾತನಾಡಿ, ನೆರೆಯಿಂದಾಗಿ ಯಾವುದೇ ಸಮಸ್ಯೆ ಎದುರಿಸದೇ, ಬೆಚ್ಚಗಿನ ಮನೆಯಲ್ಲಿ ವಾಸಿಸುತ್ತ, 3 ಹೊತ್ತು ಹೊಟ್ಟೆ ತುಂಬಾ ಆಹಾರ ಸೇವಿಸುವ, ಬಣ್ಣ ಬಣ್ಣದ ಬಟ್ಟೆ ಧರಿಸುವ, ನಾವು ಪುಣ್ಯವಂತರು. ಆದರೆ ಭೀಕಾರ ಮಳೆಯಿಂದಾಗಿ ಉಂಟಾದ ನೆರೆಯಿಂದಾಗಿ, ತಮ್ಮದನ್ನೆಲ್ಲ ಕಳೆದುಕೊಂಡ, ಮನೆಯಿಲ್ಲದೇ ನಿರಾಶ್ರಿತರ ಕೇಂದ್ರದಲ್ಲಿ ವಾಸಿಸುವ, ಒಂದು ಹೊತ್ತಿನ ಅನ್ನಕ್ಕೆ ಪರದಾಡುವ, ಉಡಲು ಬಟ್ಟೆ ಇಲ್ಲದೆ, ಉಟ್ಟ ಬಟ್ಟೆಯನ್ನೇ ಉಡುವಾ ನೆರೆ ಸಂತ್ರಸ್ತರ ನೋವಿಗೆ ಸ್ಪಂದಿಸಿ, ನಮ್ಮಿಂದಾದ ಸಹಾಯ ಮಾಡುವುದು ಪ್ರತಿಯೊಬ್ಬನ ಕರ್ತವ್ಯ. ಇಂದು ನಾವು ನಿರಾಶ್ರಿತರಿಗೆ ಆಸರೆ ಆದಲ್ಲಿ, ಮುಂದೊಂದು ದಿನ ನಮಗೆ ಆ ಪರಿಸ್ಥಿತಿ ಎದುರಾಗಿಸಬೇಕಾಗಿ ಬಂದಲ್ಲಿ ಇನ್ನೊಬ್ಬ ನಮಗೆ ಆಸರೆ ಆಗುತ್ತಾನೆ ಎನ್ನುವುದಲ್ಲಿ ಸಂಶಯವಿಲ್ಲ ಎಂದರು.
ಕಾಮರ್ಸ್ ಹಾಗೂ ಮ್ಯಾನೇಜ್ಮೆಂಟ್ ವಿಭಾಗದ ಉಪನ್ಯಾಸಕ ಅಜಿತ್, ಶ್ರೀನಿಧಿ, ಎನ್ನೆಸ್ಸೆಸ್ ಕಾರ್ಯದರ್ಶಿಗಳಾದ ಜಗತ್, ಅಭಿಲಾಶ್, ಅಜಿತ್, ಅಂಜನಾ, ಕಾವ್ಯ ಹಾಗೂ ಎನ್ನೆಸ್ಸೆಸ್ ಸ್ವಯಂ ಸೇವಕರು ಉಪಸ್ಥಿತರಿದ್ದರು.
ಕಳೆದ ಮೂರು ವರ್ಷಗಳಿಂದ ಕಾಡಾನೆ ದಾಳಿಗೆ ಒಟ್ಟು 129 ಮಂದಿ ರೈತರು ಬಲಿಯಾಗಿದ್ದಾರೆ.…
ಬಂಗಾಳಕೊಲ್ಲಿಯ ಉತ್ತರ ಭಾಗದಲ್ಲಿ ಆಗಸ್ಟ್ 15ರಂದು ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿದ್ದು, ಈಗಿನಂತೆ…
ವೈಜ್ಞಾನಿಕ ಶಿಫಾರಸ್ಸಿನಂತೆ ರಾಸಾಯನಿಕ ಗೊಬ್ಬರ ಬಳಕೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ…
ಕರಾವಳಿ ಸೇರಿದಂತೆ ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಧಾರಾಕಾರ ಮಳೆಯಾಗಿದೆ. ರಾಜ್ಯದ…
ತ್ಯಾಗಕ್ಕೊಂದು ಸ್ವ-ಸ್ವರೂಪ ಇದ್ದರೆ ಅದು ‘ಭೀಷ್ಮಾಚಾರ್ಯ’ರಿಗೆ ಹೊಂದುತ್ತದೆ. ತ್ಯಾಗವೆಂದರೆ ದೇಹವನ್ನು ಕಳೆದುಕೊಳ್ಳುವುದಲ್ಲ! ದೇಹವಿದ್ದೂ…
ವಿಜಯಪುರ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆ, ಕೃಷಿ, ತೋಟಗಾರಿಕೆ ಬೆಳೆಗಳು, ಜನ-ಜಾನುವಾರುಗಳ…