ಸುಳ್ಯ: ಅಪರೂಪದ ಕಂಕಣ ಸೂರ್ಯಗ್ರಹಣ ಸುಳ್ಯದಲ್ಲಿ ಗೋಚರಿಸಿತು. ಹಲವಾರು ಮಂದಿ ಕಂಕಣ ಸೂರ್ಯಗ್ರಹಣವನ್ನು ವೀಕ್ಷಿಸಿದರು. ಮೋಡ ಅಥವಾ ಯಾವುದೇ ಅಡೆ ತಡೆ ಇಲ್ಲದೆ ಗ್ರಹಣ ಗೋಚರಿಸಿತ್ತು. ಬೆಳಿಗ್ಗೆ 8 ಗಂಟೆ 4 ನಿಮಿಷಕ್ಕೆ ಸೂರ್ಯಗ್ರಹಣ ಆರಂಭಗೊಂಡಿತು. ಸುಮಾರು 9.17ರ ವೇಳೆಗೆ ಕಂಕಣ ಸೂರ್ಯಗ್ರಹಣ ಗೋಚರಿಸಿತು. ಕೆಲ ಹೊತ್ತು ಕಂಕಣ ಸೂರ್ಯಗ್ರಹಣದ ಸ್ಥಿತಿ ಇತ್ತು. ಪೂರ್ಣ ಗ್ರಹಣ ಉಂಟಾದ ಸಮಯದಲ್ಲಿ ಮಬ್ಬು ಕವಿದು ಸ್ವಲ್ಪ ಸಮಯ ಕತ್ತಲಿನ ವಾತಾವರಣ ಉಂಟಾಗಿತ್ತು. 11 ಗಂಟೆಯವರೆಗೂ ಗ್ರಹಣ ಗೋಚರಿಸಿತ್ತು. ಹಲವಾರು ಮಂದಿ ಗ್ರಹಣ ದರ್ಶನ ಕನ್ನಡಕದ ಮೂಲಕ ಸೂರ್ಯಗ್ರಹಣ ವೀಕ್ಷಿಸುವುದು ಕಂಡು ಬಂದಿತ್ತು. ದೇವಸ್ಥಾನಗಳಲ್ಲಿ ಪೂಜೆಗಳು ನಡೆಯಲಿಲ್ಲ. ಕೆಲವು ದೇವಾಲಯಗಳಲ್ಲಿ ಗ್ರಹಣ ಶಾಂತಿ ಹೋಮವೂ ನಡೆದಿತ್ತು. ಸುಳ್ಯ ನಗರದಲ್ಲಿ ಹಲವು ಹೋಟೆಲ್ ಗಳು ಬಂದ್ ಆಗಿತ್ತು. ನಗರದಲ್ಲಿ ಜನ ಸಂಚಾರ ವಿರಳವಾಗಿತ್ತು.
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.