ಅಡಿಕೆ ಹಳದಿಎಲೆರೋಗ ನಿರೋಧಕ ತಳಿ ಅಭಿವೃದ್ಧಿ ಹಿನ್ನೆಲೆಯಲ್ಲಿ ಸಿಪಿಸಿಆರ್‌ಐ ವಿಜ್ಞಾನಿಗಳು ಸೋಮವಾರ ಸಂಪಾಜೆ-ಚೆಂಬು ಪ್ರದೇಶಕ್ಕೆ ಭೇಟಿ ನೀಡಿದರು. ಅನೇಕ ವರ್ಷಗಳಿಂದ ಹಳದಿ ಎಲೆರೋಗ ಇದ್ದ ತೋಟದಲ್ಲಿ ಈಗಲೂ ಹಸಿರಾಗಿರುವ ಅಡಿಕೆ ಮರಗಳನ್ನು ಗುರುತು ಮಾಡುವ ಕಾರ್ಯಕ್ಕೆ ಚಾಲನೆ ನೀಡಿದರು. ಮುಂದಿನ ದಿನಗಳನ್ನು ಇನ್ನಷ್ಟು ತೋಟಗಳಲ್ಲಿ ಇಂತಹ ಮರಗಳ ಗುರುತಿಸುವಿಕೆಯ ಕಾರ್ಯ ನಡೆಯಲಿದೆ.
ಅಡಿಕೆ ಹಳದಿ ಎಲೆರೋಗಕ್ಕೆ ಸುಳ್ಯ ತಾಲೂಕಿನ ಸಂಪಾಜೆ ಹಾಗೂ ಕೊಡಗು ಜಿಲ್ಲೆಯ ಚೆಂಬು ಪ್ರದೇಶವು ಹಾಟ್‌ಸ್ಫಾಟ್ ಎಂದು ಗುರುತಿಸಲಾಗಿತ್ತು. ಕಳೆದ ಅನೇಕ ವರ್ಷಗಳಿಂದ ಈ ಪ್ರದೇಶದಲ್ಲಿ ಹಳದಿ ಎಲೆರೋಗ ಕಂಡುಬಂದು ವಿಸ್ತರಣೆಯಾಗಿತ್ತು. ಅನೇಕ ವರ್ಷಗಳಿಂದಲೂ ಹಳದಿ ಎಲೆರೋಗ ಇದ್ದು ಅಂತಹ ತೋಟದಲ್ಲಿ ಈಗಲೂ ಹಸಿರಾಗಿರುವ ಮರಗಳಿಗೆ ರೋಗ ನಿರೋಧಕ ಶಕ್ತಿ ಇದೆ ಎಂಬುದು ಸಾಮಾನ್ಯವಾಗಿರುವ ಅಧ್ಯಯನ.
ಇದೀಗ ಅಂತಹ ಮರಗಳ ಗುರುತು ಮಾಡುವ ಕಾರ್ಯವನ್ನು ಸಿಪಿಸಿಆರ್‌ಐ ವಿಜ್ಞಾನಿಗಳ ತಂಡ ಮಾಡುತ್ತಿದೆ. ಮುಂದೆ ಈ ಮರಗಳ ಆರೈಕೆ ಮಾಡಿದ ಬಳಿಕ ರೋಗದ ಅಂಶಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿ ರೋಗ ಮುಕ್ತವಾಗಿರುವ ಮರ ಎಂಬ ಖಾತ್ರಿ ಬಳಿಕ ಮುಂದಿನ ವರ್ಷ ಅಂತಹದ್ದೇ ಮರಗಳ ನಡುವೆ ಪರಾಸ್ಪರ್ಶ ನಡೆಸಿ ರೋಗ ನಿರೋಧಕ ತಳಿ ಅಭಿವೃದ್ಧಿ ಮಾಡುವುದು ಹಾಗೂ ಅದೇ ವೇಳೆ ಟಿಶ್ಯು ಕಲ್ಚರ್ ಗಿಡಗಳ ಅಭಿವೃದ್ದಿ ಕೂಡಾ ನಡೆಸುವುದು ಈ ಯೋಜನೆಯ ಉದ್ದೇಶವಾಗಿದೆ.
ಸೋಮವಾರ ಸಂಪಾಜೆ ಚೆಂಬು ಪ್ರದೇಶದಲ್ಲಿ ಸಿಪಿಸಿಆರ್‌ಐ ವಿಟ್ಲದ ಬೆಳೆ ಉತ್ಪಾದನಾ ವಿಭಾಗದ ವಿಜ್ಞಾನಿ ಡಾ.ಭವಿಷ್ಯ ಅವರ ನೇತೃತ್ವದಲ್ಲಿ ಮರಗಳನ್ನು ಗುರುತು ಮಾಡುವ ಕೆಲಸ ನಡೆಯಿತು.ಶ್ರೀನಿವಾಸ ನಿಡಿಂಜಿ, ರವಿ ಬಾಲೆಂಬಿ, ಗಿರೀಶ್ ಚಂದಡ್ಕ, ಭವ್ಯಾನಂದ ಕುಯಿಂತೋಡು ಅವರ ತೋಟಗಳಿಗೆ ಭೇಟಿ ನೀಡಿದರು.
ಸಂಪಾಜೆ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಅವರ ನೇತೃತ್ವದ ತಂಡ ಸಹಕಾರ ನೀಡಿತು. ಈ ಸಂದರ್ಭ ಸಹಕಾರಿ ಯೂನಿಯನ್ ಅಧ್ಯಕ್ಷ ರಮೇಶ್ ದೇಲಂಪಾಡಿ, ಕೃಷಿಕರಾದ ಭವ್ಯಾನಂದ ಕುಯಿಂತೋಡು, ಶ್ರೀನಿವಾಸ ನಿಡಿಂಜೆ, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಇದ್ದರು.
ಮಲೇಷ್ಯಾದಲ್ಲಿ ರಬ್ಬರ್ ಉತ್ಪಾದನೆ ಇಳಿಕೆ ಭಾರತೀಯ ರೈತರಿಗೆ ಬೆಲೆ ಬೆಂಬಲದ ಸೂಚನೆ ನೀಡುತ್ತಿದೆ.…
ಕೊಡಗಿನಲ್ಲಿ ಕಾಡಾನೆ ದಾಳಿಗೆ ಕಾಫಿ ತೋಟದ ಮಾಲೀಕ ಗಣಪತಿ ಮೃತಪಟ್ಟಿದ್ದಾರೆ. ಕಾಡಾನೆ ಹಾವಳಿ…
ಹಾಲಿನ ಗುಣಮಟ್ಟ ಕಾಪಾಡಲು ಸಹಕಾರ ಸಂಘಗಳಿಗೆ ವಿಶೇಷ ಕಲಬೆರಕೆ ಪತ್ತೆ ಕಿಟ್‌ಗಳನ್ನು ವಿತರಿಸಲಾಗುತ್ತಿದೆ.
ಸೌದೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆ ಅಕ್ರಮ ಮರ ಕಡಿತಲೆ ತಡೆಯಲು ಸಚಿವ ಈಶ್ವರ…
ಕೃಷಿಯ ಮೂಲಕ ಕೇವಲ ಆಹಾರ ಉತ್ಪಾದನೆ ಹೆಚ್ಚಿಸುವುದಕ್ಕಿಂತ ಸಮಾನ ವಿತರಣೆ, ಪರಿಸರ ಸಂರಕ್ಷಣೆ…
ಪಶ್ಚಿಮ ಏಷ್ಯಾ ಯುದ್ಧದ ಪರಿಣಾಮದಿಂದ ಭಾರತೀಯ ಟೈರ್ ಉದ್ಯಮಕ್ಕೆ ರಫ್ತು ಮತ್ತು ವೆಚ್ಚದ…