Advertisement
ಸುದ್ದಿಗಳು

‘ಇಲ್ಲಿ ಆಗಲ್ಲ’ ಅನ್ನೋದನ್ನು ಮುರಿದ ರೈತ – ಬಿಸಿಲು ನಾಡಿನ ಸ್ಟ್ರಾಬೆರಿ ಕಥೆ

Share

ಶೀತ ಪ್ರದೇಶಗಳಲ್ಲಿ ಮಾತ್ರ ಸ್ಟ್ರಾಬೆರಿ ಬೆಳೆಯಲು ಸಾಧ್ಯ ಎಂಬ ಸಾಮಾನ್ಯ ನಂಬಿಕೆ ಇದೆ. ಇದಕ್ಕೆ ಅಪವಾದವಾಗಿ ಬಿಸಿಲನಾಡು ಉತ್ತರ ಕರ್ನಾಟಕದಲ್ಲೂ ಸ್ಟ್ರಾಬೆರಿ ಕೃಷಿ ಯಶಸ್ವಿಯಾಗಬಹುದು ಎಂಬುದನ್ನು ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ನಿಡೋದಾ ಗ್ರಾಮದ ರೈತ ವೈಜಿನಾಥ್ ನಿಡೋದಾ ಅವರು ಪ್ರಾಯೋಗಿಕವಾಗಿ ಸಾಬೀತುಪಡಿಸಿದ್ದಾರೆ.

2024ರಲ್ಲಿ ಅರ್ಧ ಎಕರೆ ಭೂಮಿಯಲ್ಲಿ 10 ಸಾವಿರ ಸ್ಟ್ರಾಬೆರಿ ಸಸಿಗಳನ್ನು ಪ್ಲಾಂಟೇಷನ್ ಮಾಡಿದ ಅವರು, ಮೊದಲ ಪ್ರಯತ್ನದಲ್ಲಿ ನಿರ್ವಹಣಾ ತಪ್ಪುಗಳಿಂದ ಸುಮಾರು 30 ಶೇಕಡಾ ಸಸಿಗಳು ನಾಶವಾಗಿದ್ದವು. ಆದರೆ, ಕಳೆದ ವರ್ಷದ ಅನುಭವದಿಂದ ಪಾಠ ಕಲಿತು ಈ ಬಾರಿ ತಂತ್ರಜ್ಞಾನ ಹಾಗೂ ಕಾಳಜಿಯಲ್ಲಿ ಸುಧಾರಣೆ ಮಾಡಿಕೊಂಡ ಪರಿಣಾಮ, ಈ ವರ್ಷ ಕೇವಲ ಶೇ.5 ರಷ್ಟು ಮಾತ್ರ ಸಸಿಗಳ ಡೆತ್ ರೇಟ್ ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಇದನ್ನೂ ಸಂಪೂರ್ಣವಾಗಿ ತಪ್ಪಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ತಿಳಿಸಿದರು.

ಬೀದರ್ ಜಿಲ್ಲೆಯ ವಾತಾವರಣ, ಮಣ್ಣು ಮತ್ತು ನೀರು ಸ್ಟ್ರಾಬೆರಿ ಬೆಳೆಗೆ ಅತ್ಯಂತ ಸೂಕ್ತವಾಗಿದೆ. 15 ರಿಂದ 30 ಡಿಗ್ರಿ ಸೆಲ್ಸಿಯಸ್ ವರೆಗೆ ತಾಪಮಾನ ಇರಬೇಕು. ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 15 ರವರೆಗೆ ಪ್ಲಾಂಟೇಷನ್ ಮಾಡಲು ಸೂಕ್ತ ಸಮಯವಾಗಿದ್ದು, ಚಳಿಗಾಲ ಆರಂಭಕ್ಕೂ ಮುನ್ನ ಸಸಿಗಳನ್ನು ನೆಟ್ಟರೆ ಉತ್ತಮ ಫಲ ದೊರೆಯುತ್ತದೆ ಎಂದು ವೈಜಿನಾಥ್ ನಿಡೋದಾ ವಿವರಿಸುತ್ತಾರೆ. ಚಳಿಗಾಲದಲ್ಲಿ ಹೂ ಹಾಗೂ ಹಣ್ಣು ಬಿಡುವ ಪ್ರಮಾಣ ಹೆಚ್ಚಾಗುತ್ತದೆ. ಆದರೆ ಮಾರ್ಚ್ ತಿಂಗಳಲ್ಲಿ ಬೇಸಿಗೆ ಆರಂಭವಾದಂತೆ ಇಳುವರಿ ಕಡಿಮೆಯಾಗುತ್ತದೆ ಎಂದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಈ ಯಶಸ್ಸಿನಿಂದ ಉತ್ತೇಜನಗೊಂಡ ಅವರು 2025ರಲ್ಲಿ 2 ಎಕರೆ ಜಮೀನಿನಲ್ಲಿ ಸ್ಟ್ರಾಬೆರಿ ಪ್ಲಾಂಟೇಷನ್ ಮಾಡಿದ್ದಾರೆ. ಈಗಾಗಲೇ ಫಸಲು ಬರಲು ಆರಂಭವಾಗಿದ್ದು, ಪ್ರತಿದಿನ ಸುಮಾರು ₹15,000 ರಿಂದ ₹16,000 ಆದಾಯ ಗಳಿಸುತ್ತಿದ್ದಾರೆ. ಉತ್ತರ ಕರ್ನಾಟಕದ ರೈತರಿಗೆ ಸ್ಟ್ರಾಬೆರಿ ಕೃಷಿ ಹೊಸ ಆರ್ಥಿಕ ಪರ್ಯಾಯವಾಗಿ ಮೂಡಿಬರುತ್ತಿದೆ.

(ಡಿಜಿಟಲ್‌ ಸೋರ್ಸ್)

ಇದನ್ನೂ ಓದಿ…

ಓದುಗರ ಅಭಿಪ್ರಾಯಕ್ಕೆ 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ರಸ್ತೆ ಬದಿಯಲ್ಲಿ ಕಸ ಎಸೆಯುವವರೇ, ಒಮ್ಮೆ ಇವರನ್ನು ನೋಡಿ…! – 5 ದಿನಗಳಲ್ಲಿ ಕಂಡ ಭಯಾನಕ ವಾಸ್ತವ

ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…

5 hours ago

ಸುಳ್ಯದಲ್ಲಿ ಅ.19 ರಂದು ಪ್ರಶಾಂತಿ ಡೆಂಟಲ್ ಕ್ಲಿನಿಕ್ ಉದ್ಘಾಟನೆ

ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…

17 hours ago

ಹವಾಮಾನ ವರದಿ | 13-10-2026 | ಅ.15ರಿಂದ ಕರ್ನಾಟಕದಲ್ಲಿ ಮತ್ತೆ ಮಳೆ ಸಾಧ್ಯತೆ – ಹಿಂಗಾರು ಆರಂಭದ ಮುನ್ಸೂಚನೆ

ರಾಜ್ಯದಲ್ಲಿ ಅಕ್ಟೋಬರ್ 14ರವರೆಗೆ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ.…

18 hours ago

ಚಿತ್ರದುರ್ಗದಲ್ಲಿ ಕಣ್ಣೆದುರೇ ಒಣಗಿದ ಬೆಳೆ… ರೈತನಿಗೆ ದಿಕ್ಕೇ ತೋಚದ ಸ್ಥಿತಿ – ವಿಶೇಷ ಪ್ಯಾಕೇಜ್‌ಗೆ ರೈತರ ಒತ್ತಾಯ

ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆ ಕೊರತೆ ಮತ್ತು ಕೊಳವೆ ಬಾವಿಗಳಲ್ಲಿ ನೀರು ಬತ್ತುತ್ತಿರುವುದರಿಂದ ಈರುಳ್ಳಿ,…

18 hours ago

ಗದಗ ಜಿಲ್ಲೆಯಲ್ಲಿ ಹಿಂಗಾರು ಬಿತ್ತನೆ ಆರಂಭ – ರಿಯಾಯಿತಿ ದರದಲ್ಲಿ ಕಡಲೆ, ಜೋಳ, ಶೇಂಗಾ ಬೀಜ ಲಭ್ಯ

ಗದಗ ಜಿಲ್ಲೆಯಲ್ಲಿ 2026-27ನೇ ಸಾಲಿನ ಹಿಂಗಾರು ಹಂಗಾಮು ಆರಂಭವಾಗಿದ್ದು, ಕಡಲೆ, ಜೋಳ, ಶೇಂಗಾ…

18 hours ago

ಬೆಳಗಾವಿ ರೈತರಿಗೆ ಸಾಲ ಮರುಪಾವತಿಯಲ್ಲಿ ಪರಿಹಾರ ಸಿಗುತ್ತಾ?

ಬೆಳಗಾವಿ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರೈತರ ಸಾಲ ಮರುರಚನೆ ಮಾಡಿ, 12…

18 hours ago