ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಗ್ರಾಮದ ಅರಸಿನಮಕ್ಕಿಯಲ್ಲಿ ತಲೆದೋರಿರುವ ಬಿಎಸ್ಸೆನ್ನೆಲ್ ನೆಟ್‌ವರ್ಕ್ ಸಮಸ್ಯೆ ಬಗ್ಗೆ ಪ್ರಧಾನಮಂತ್ರಿಯವರ ಕಾರ್ಯಾಲಯಕ್ಕೆ ನೀಡಿದ ದೂರಿಗೆ ತಕ್ಷಣ ಸ್ಪಂದನೆ ದೊರೆತಿದ್ದು ಹೊಸ ಬ್ಯಾಟರಿ ಅಳವಡಿಕೆಗೆ ಮುಂದಾಗಿದೆ. ಯಾವುದೇ ತಾಂತ್ರಿಕ ಸಮಸ್ಯೆಗಳಿಲ್ಲ. ಹೊಸ ಬ್ಯಾಟರಿ ಖರೀದಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಮಂಜೂರಾತಿ ದೊರೆತ ಕೂಡಲೇ ಅಳವಡಿಸುವುದಾಗಿ ಪ್ರಧಾನಿಯವರ ಕಾರ್ಯಾಲಯದಿಂದ ಪ್ರತ್ಯುತ್ತರ ಬಂದಿದೆ. ಆದರೆ ಬಿ ಎಸ್ ಎನ್ ಎಲ್ ಇದಕ್ಕೆ ಸ್ಪಂದಿಸುವುದೇ ಎನ್ನುವುದು ಈಗಿರುವ ಪ್ರಶ್ನೆಯಾಗಿದೆ.
ಅರಸಿನಮಕ್ಕಿಯಲ್ಲಿ ಬಿಎಸ್ಸೆನ್ನೆಲ್ ಟವರ್ ಇದ್ದು ಬಹಳ ಹಿಂದೆ ಬಿಎಸ್ಸೆನ್ನೆಲ್ ಉತ್ತಮ ಸೇವೆ ನೀಡುತ್ತಿದ್ದುದರಿಂದ ಅತ್ಯಧಿಕ ಬಳಕೆದಾರರಿದ್ದರು. ಆದರೆ ಇತ್ತೀಚೆಗೆ ಹಲವಾರು ಸಮಯದಿಂದ ವಿದ್ಯುತ್ ಹೋದಾಗ ಬ್ಯಾಟರಿ ಬ್ಯಾಕಪ್ ಇಲ್ಲದಿರುವುದರಿಂದ, ಪರ್ಯಾಯ ಬ್ಯಾಟರಿ ವ್ಯವಸ್ಥೆ ಇಲ್ಲದಿರುವುದರಿಂದ ಟವರ್ ಆಫ್ ಆಗಿ ನೆಟ್‌ವರ್ಕ್ ಹೋಗುತ್ತಿತ್ತು. ಇದರಿಂದಾಗಿ ಶಿಶಿಲ, ಶಿಬಾಜೆ, ರೆಖ್ಯ, ಹತ್ಯಡ್ಕ ಗ್ರಾಮಗಳ ಕೇಂದ್ರ ಸ್ಥಾನವಾದ ಅರಸಿನಮಕ್ಕಿಯಲ್ಲಿ ಆಧಾರ್ ನೋಂದಣಿ, ಕೋವಿಡ್ ಸಂದರ್ಭದಲ್ಲಿ ಸರಕಾರದ ಪ್ಯಾಕೇಜ್ ಘೋಷಣೆಯಾದಾಗ ಕಾರ್ಮಿಕರು, ರಿಕ್ಷಾ ಚಾಲಕರಿಗೆ ಸೌಲಭ್ಯಗಳಿಗೆ ನೋಂದಣಿಗೆ, ವಿದ್ಯಾರ್ಥಿಗಳಿಗೆ ಬಸ್‌ಪಾಸ್ ಪಡೆಯಲು ಆನ್‌ಲೈನ್ ನೋಂದಣಿಗೆ, ಪಡಿತರ ಪಡೆಯಲು ಬರುವವರಿಗೆ ಮೊಬೈಲ್‌ಗೆ ಒಟಿಪಿ ಪಡೆಯಲು ತೀವ್ರ ಸಮಸ್ಯೆಗಳು ಉಂಟಾಗುತ್ತಿತ್ತು.
ಜೊತೆಗೆ ನೆಟ್‌ವರ್ಕ್ ಇದ್ದರೂ ಕೀಪ್ಯಾಡ್ ಹ್ಯಾಂಡ್‌ಸೆಟ್‌ಗಳಲ್ಲಿ ವಾರಗಟ್ಟಲೆ ಫೋನ್ ಕರೆ ಹೋಗದಿರುವುದು, ಸ್ಮಾರ್ಟ್ ಫೋನ್ ಇರುವವರಿಗೆ ಮಾತ್ರ ಕರೆಗಳು, ಡಾಟಾ ಸೌಲಭ್ಯ ಸಿಗುವ ಸಮಸ್ಯೆಯೂ ಉಂಟಾಗಿತ್ತು ಈ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ತಿಳಿಸಿದ್ದರೂ ಅವರು ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಗ್ರಾಮಸ್ಥರಾದ ವೃಷಾಂಕ್ ಖಾಡಿಲ್ಕರ್ ಅವರು ಸೆ.22 ರಂದು ಪ್ರಧಾನಮಂತ್ರಿಯವರ ಸಾರ್ವಜನಿಕ ಕುಂದುಕೊರತೆ ವಿಭಾಗಕ್ಕೆ ದೂರು ಸಲ್ಲಿಸಿದ್ದು ಖಾಸಗಿ ಕಂಪೆನಿಗಳ ಟವರ್‌ಗಳನ್ನೂ ಹೆಚ್ಚಿಸುವಂತೆಯೂ ತಿಳಿಸಿದ್ದರು. ಇದೀಗ ದೂರು ನೀಡಿದ ಒಂದು ವಾರದೊಳಗೆ ಸಮಸ್ಯೆ ಬಗೆಹರಿಸುವ ಭರವಸೆ ಬಂದಿದೆ. ಈ ಪ್ರತಿಕ್ರಿಯೆ ಬಂದಿದೆ. ನೆಟ್‌ವರ್ಕ್ ಸಮಸ್ಯೆಯಿಂದ ಗ್ರಾಹಕರಿಗೆ ಆಗುತ್ತಿರುವ ಅನಾನುಕೂಲತೆಗೂ ಪ್ರಧಾನಮಂತ್ರಿಯವರ ಕಾರ್ಯಾಲಯ ವಿಷಾದ ವ್ಯಕ್ತಪಡಿಸಿದೆ.
ಹಲವು ಕಡೆಗಳಲ್ಲಿ ಇಂತಹದ್ದೇ ಪ್ರತಿಕ್ರಿಯೆ ಪ್ರಧಾನಿಗಳ ಕಾರ್ಯಾಲಯದಿಂದ ಬಂದಿದೆ. ಸದ್ಯವೇ ಬ್ಯಾಟರಿ ಬದಲಾವಣೆ ಎಂದೂ ಉತ್ತರ ಬಂದಿದೆ. ಬ್ಯಾಟರಿ ಲಭ್ಯವಾದ ಕೂಡಲೇ ಬದಲಾವಣೆ ಎಂದೂ ಹೇಳುವ ಬಿ ಎಸ್ ಎನ್ ಎಲ್ ಇದುವರೆಗೂ ಬ್ಯಾಟರಿ ಅಳವಡಿಕೆ ಕಾರ್ಯ ಹಲವು ಕಡೆ ನಡೆಸಿಲ್ಲ. ಪ್ರಧಾನಿ ಕಾರ್ಯಾಲಯದ ಪ್ರತಿಕ್ರಿಯೆಯ ವೇಗದಲ್ಲಿಯೇ ಬಿ ಎಸ್ ಎನ್ ಎಲ್ ಕೂಡಾ ಸ್ಪಂದಿಸಿದೆ ಗ್ರಾಮೀಣ ಭಾಗದ ಅತ್ಯಂತ ಸುದೃಢ ನೆಟ್ವರ್ಕ್ ಬಿ ಎಸ್ ಎನ್ ಎಲ್ ಆಗುವುದರಲ್ಲಿ ಸಂಶಯವಿಲ್ಲ.
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…