#ChessWorldCup2023| ಚೆಸ್ ವಿಶ್ವಕಪ್ ​ಫೈನಲ್ | 2ನೇ ದಿನದ ಆಟವೂ ಡ್ರಾ | ನಾಳೆ ಕುತೂಹಲದ ಟೈಬ್ರೇಕರ್ ಪಂದ್ಯ |

August 23, 2023
6:34 PM
ಆರ್ ಪ್ರಜ್ಞಾನಂದ ಹಾಗೂ ಮ್ಯಾಗ್ನಸ್ ಕಾರ್ಲ್‌ಸೆನ್ ನಡುವಣ ಈ ಪಂದ್ಯದ ಮೊದಲ ಗೇಮ್​ ಕೂಡ ಡ್ರಾ ಆಗಿತ್ತು. ಇದೀಗ ಫೈನಲ್ ಪಂದ್ಯದ 2ನೇ ಕ್ಲಾಸಿಕ್ ಗೇಮ್ ಕೂಡ ಸಮಬಲದೊಂದಿಗೆ ಅಂತ್ಯವಾಗಿದೆ.  ಹೀಗಾಗಿ ಬುಧವಾರ ನಡೆಯಲಿರುವ ಟೈಬ್ರೇಕರ್ ಪಂದ್ಯದ​ ಮೂಲಕ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ.

ಭಾರಿ ಕುತೂಹಲದಿಂದ ವಿಶ್ವವೇ ಕಾಯುತ್ತಿರುವ ಚೆಸ್ ವಿಶ್ವಕಪ್​ ಫೈನಲ್​ ನಾಳೆ ನಡೆಯಲಿದೆ.  ಅಝರ್​ಬೈಜಾನ್​ನಲ್ಲಿ ನಡೆದ ಚೆಸ್ ವಿಶ್ವಕಪ್​ ಫೈನಲ್​ನ ಗೇಮ್ ಕೂಡ ಡ್ರಾನಲ್ಲಿ ಅಂತ್ಯಗೊಂಡಿದೆ.ಆರ್ ಪ್ರಜ್ಞಾನಂದ ಹಾಗೂ ಮ್ಯಾಗ್ನಸ್ ಕಾರ್ಲ್‌ಸೆನ್ ನಡುವಣ ಈ ಪಂದ್ಯದ ಮೊದಲ ಗೇಮ್​ ಕೂಡ ಡ್ರಾ ಆಗಿತ್ತು. ಇದೀಗ ಫೈನಲ್ ಪಂದ್ಯದ 2ನೇ ಕ್ಲಾಸಿಕ್ ಗೇಮ್ ಕೂಡ ಸಮಬಲದೊಂದಿಗೆ ಅಂತ್ಯವಾಗಿದೆ.  ಹೀಗಾಗಿ ಬುಧವಾರ ನಡೆಯಲಿರುವ ಟೈಬ್ರೇಕರ್ ಪಂದ್ಯದ​ ಮೂಲಕ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ.

ಮಂಗಳವಾರ ನಡೆದ ಫೈನಲ್ ಪಂದ್ಯದ ಮೊದಲ ಗೇಮ್​ನಲ್ಲಿ ನಾರ್ವೆಯ ಕಾರ್ಲ್​ಸೆನ್ ಅವರನ್ನು ಆರಂಭದಲ್ಲೇ ಒತ್ತಡಕ್ಕೆ ಸಿಲುಕಿಸುವಲ್ಲಿ ಪ್ರಜ್ಞಾನಂದ ಯಶಸ್ವಿಯಾಗಿದ್ದರು. ಮೊದಲ ಗೇಮ್​ನ ಅಂತಿಮ ಸುತ್ತಿನಲ್ಲಿ ಜಾಣ್ಮೆಯ ನಡೆಗಳ ಮೂಲಕ ವಿಶ್ವದ ನಂಬರ್ 1 ಚೆಸ್ ತಾರೆ ಕಾರ್ಲಸೆನ್ ಪಂದ್ಯದಲ್ಲಿ ಹಿಡಿತ ಸಾಧಿಸಿದರು. ಇದರೊಂದಿಗೆ ಮೊದಲ ಸುತ್ತು 35 ಚಲನೆಗಳ ನಂತರ ಡ್ರಾದಲ್ಲಿ ಕೊನೆಗೊಂಡಿತು. ಬುಧವಾರ ನಡೆದ 2ನೇ ಗೇಮ್​ನಲ್ಲಿ ಕಪ್ಪು ಕಾಯಿಗಳೊಂದಿಗೆ ಚದುರಂಗ ಚಲನೆ ಆರಂಭಿಸಿದ್ದ ಪ್ರಜ್ಞಾನಂದ ಆರಂಭದಲ್ಲೇ ಸಮಬಲದ ಹೋರಾಟ ನಡೆಸಿದ್ದರು. ಕಾರ್ಲ್​ಸೆನ್ ಜಾಣ ಚಲನೆಗೆ ಅತ್ಯುತ್ತಮ ಚೆಕ್​ ನಡೆಗಳ ಮೂಲಕ ಪ್ರಜ್ಞಾನಂದ ಕೌಂಟರ್ ನೀಡಿದ್ದರು. ಪರಿಣಾಮ 22 ನಡೆಗಳ ನಂತರ ಕೂಡ ಪಂದ್ಯವು ಸಮತೋಲಿತವಾಗಿತ್ತು. ಈ ಸಮಬಲವನ್ನು ಕಾಯ್ದುಕೊಳ್ಳುವಲ್ಲಿ ಇಬ್ಬರು ಆಟಗಾರರು ಯಶಸ್ವಿಯಾದರು. ಅಲ್ಲದೆ 30 ನಡೆಗಳ ನಂತರ ಪಂದ್ಯವು ಡ್ರಾನಲ್ಲಿ ಅಂತ್ಯವಾಯಿತು. ಇದರೊಂದಿಗೆ 2 ಕ್ಲಾಸಿಕ್ ಗೇಮ್​ಗಳು 1-1 ಅಂತರದಿಂದ ಸಮಬಲವಾಗಿದೆ. ಇನ್ನು ಫಲಿತಾಂಶ ನಿರ್ಧರಿಸಲು ಟೈಬ್ರೇಕರ್ ಪಂದ್ಯವನ್ನು ಆಯೋಜಿಸಲಾಗುತ್ತದೆ.

ಟೈಬ್ರೇಕ್​​ರ್​ನಲ್ಲಿ ಫಲಿತಾಂಶ ನಿರ್ಧಾರ ಹೇಗೆ? : ಎರಡು ಕ್ಲಾಸಿಕ್ ಗೇಮ್​ಗಳಲ್ಲೂ ಫಲಿತಾಂಶ ಮೂಡಿಬರದ ಕಾರಣ ಪಂದ್ಯವನ್ನು ಟೈಬ್ರೇಕರ್​ನತ್ತ ಕೊಂಡೊಯ್ಯಲಾಗಿದೆ. ಇಲ್ಲಿ ಇಬ್ಬರು ಆಟಗಾರರು 10-10 ನಿಮಿಷಗಳ ರ್ಯಾಪಿಡ್ ಗೇಮ್​ಗಳನ್ನು ಆಡಲಿದ್ದಾರೆ. ಇದರಲ್ಲೂ ವಿಜೇತ ಯಾರೆಂದು ನಿರ್ಧಾರವಾಗದಿದ್ದರೆ 5 ನಿಮಿಷಗಳ ಎರಡು ರ್ಯಾಪಿಡ್​ ಗೇಮ್​ಗಳ ಅವಕಾಶ ನೀಡಲಾಗುತ್ತದೆ. ಇನ್ನು ರ್ಯಾಪಿಡ್​ ಗೇಮ್​ಗಳು ಕೂಡ ಡ್ರಾಗೊಂಡರೆ ಸಡನ್ ಡೆತ್ ಮೋಡ್‌ನಲ್ಲಿ ಒಂದೇ ಬ್ಲಿಟ್ಝ್ ಗೇಮ್​ ಆಡಲಾಗುತ್ತದೆ. ಇದರಲ್ಲಿ ಗೆದ್ದವರು ಚಾಂಪಿಯನ್ ಆಗಲಿದ್ದಾರೆ. ಹೀಗಾಗಿ ನಾಳಿನ ಪಂದ್ಯದಲ್ಲಿ ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗುವ ನಿರೀಕ್ಷೆಯಿದೆ.

ಟೈಬ್ರೇಕರ್​ ಮೂಲಕ ಫೈನಲ್​ಗೆ ಎಂಟ್ರಿ: ಇದಕ್ಕೂ ಮುನ್ನ ವಿಶ್ವದ ನಂಬರ್-3 ಚೆಸ್ ತಾರೆ ಫ್ಯಾಬಿಯಾನೊ ಕರುವಾನಾ ಹಾಗೂ ಪ್ರಜ್ಞಾನಂದ ಸೆಮಿಫೈನಲ್​ನಲ್ಲಿ ಮುಖಾಮುಖಿಯಾಗಿದ್ದರು. ರೋಚಕ ಪೈಪೋಟಿಗೆ ಸಾಕ್ಷಿಯಾಗಿದ್ದ ಈ ಪಂದ್ಯದ ಮೊದಲೆರಡು ಗೇಮ್​ಗಳು ಡ್ರಾನಲ್ಲಿ ಅಂತ್ಯಗೊಂಡಿದ್ದವು. ಹೀಗಾಗಿ ಟೈಬ್ರೇಕರ್​ನಲ್ಲಿ ಪಂದ್ಯವನ್ನು ಮುಂದುವರೆಸಲಾಯಿತು. ಈ ಹಂತದಲ್ಲಿ ಜಾಣ್ಮೆಯ ನಡೆಗಳೊಂದಿಗೆ  3.5-2.5 ಅಂತರದಿಂದ ಫ್ಯಾಬಿಯಾನೊ ಕರುವಾನಾಗೆ ಸೋಲುಣಿಸಿ  ಪ್ರಜ್ಞಾನಂದ ಫೈನಲ್​ಗೆ ಪ್ರವೇಶಿಸಿದ್ದರು. ಇದೀಗ ಮತ್ತೆ  ಟೈಬ್ರೇಕರ್​ ಮೂಲಕವೇ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಬೇಕಾಗಿದೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ರಬ್ಬರ್ ಕ್ಷೇತ್ರಕ್ಕೆ ಹೊಸ ಅವಕಾಶ – ಈಗ ಅಸ್ಸಾಂ ದೇಶದ ಮೂರನೇ ಅತಿದೊಡ್ಡ ರಬ್ಬರ್ ಉತ್ಪಾದಕ ರಾಜ್ಯ
June 11, 2026
7:43 PM
by: ದ ರೂರಲ್ ಮಿರರ್.ಕಾಂ
ಕೇರಳದಲ್ಲಿ ಜೂನ್ 12-13 ರಂದು ಭಾರೀ ಮಳೆ ಎಚ್ಚರಿಕೆ – ಬೆಂಗಳೂರು ಸೇರಿ ಕರ್ನಾಟಕದ ಹಲವು ಭಾಗಗಳಲ್ಲಿ ಉತ್ತಮ ಮಳೆ ಸಾಧ್ಯತೆ
June 11, 2026
4:50 PM
by: ದ ರೂರಲ್ ಮಿರರ್.ಕಾಂ
ಭಾರತೀಯ ಮಾವಿನ ಹಣ್ಣಿಗೆ ನೇಪಾಳ ನಿಷೇಧವಿಲ್ಲ – ಸುಳ್ಳು ವರದಿಗಳಿಗೆ ಭಾರತ-ನೇಪಾಳ ಸರ್ಕಾರಗಳ ಸ್ಪಷ್ಟನೆ
June 11, 2026
10:05 AM
by: ದ ರೂರಲ್ ಮಿರರ್.ಕಾಂ
ಅಡಿಕೆ ಕೃಷಿ ಲಾಭದಾಯಕವೇ..? – ಮೂರು ವರ್ಷದಲ್ಲಿ ಕೆಜಿಗೆ ₹34.53 ವೆಚ್ಚ ಏರಿಕೆ – ನ್ಯಾಯಸಮ್ಮತ ಬೆಲೆಗಾಗಿ ರೈತರ ಒತ್ತಾಯ
June 10, 2026
10:30 PM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror