ಯುಬಾರಿ ಕಿಂಗ್ ಕಲ್ಲಂಗಡಿ. ಈ ಹೆಸರನ್ನು ಕೇಳಿದಿರಾ?. ಇದು ಯಾವುದೋ ಊರಿನ ಹೆಸರಲ್ಲ ಬದಲಾಗಿ ಇದು ಜಪಾನ್ನ ಹೊಕ್ಕೈಡೋ ದ್ವೀಪದ ಯುಬಾರಿ ಪ್ರದೇಶದಲ್ಲಿ ಮಾತ್ರ ಈ ಹಣ್ಣನ್ನು ಬೆಳೆಸಲಾಗುತ್ತದೆ. ಜಗತ್ತಿನ ಅತ್ಯಂತ ದುಬಾರಿ ಹಣ್ಣು ಎಂಬ ಹೆಗ್ಗಳಿಕೆ ಇರುವ ಹಣ್ಣಾಗಿದೆ.
ಸಾಮಾನ್ಯವಾಗಿ ಈ ಹಣ್ಣನ್ನು ನೋಡಲು ಕಲ್ಲಂಗಡಿ ಹಣ್ಣಿನಂತೆ ಇದೆ. ಇದು ದುಂಡಾಗಿದ್ದು, ಮೇಲ್ಭಾಗದಲ್ಲಿ ಜಾಲರಿಯಂತಿರುವ ವಿನ್ಯಾಸ ಇದೆ. ಇದರ ತಿರುಳು ಅತ್ಯಂತ ಮೃದುವಾಗಿದ್ದು, ಅಸಾಧಾರಣ ಸಿಹಿತನ ಹೊಂದಿರುವುದರಿಂದ ಜಪಾನಿನಲ್ಲಿ ಇದು ಐಷಾರಾಮಿ ಉತ್ವನ್ನವಾಗಿದೆ. ಈ ಹಣ್ಣಿನ ಉತ್ಪಾದನಾ ಸಂಖ್ಯೆ ಕಡಿಮೆ ಇರುವುದರಿಂ ಬೇಡಿಕೆ ಹೆಚ್ಚಾಗಿದೆ.
ಇದನ್ನು ತೆರೆದ ಹೊಲದಲ್ಲಿ ಬೆಳೆಸಲು ಆಗುವುದಿಲ್ಲ. ಸಂಪೂರ್ಣ ನಿಯಂತ್ರಿತ ವಾತಾವರಣದಲ್ಲ ನೀರು ತಾಪಮಾನ ಮತ್ತು ಮಣ್ಣಿನ ಗುಣಮಟ್ಟವನ್ನು ಕಟ್ಟುನಿಟ್ಟಾಗಿ ಪರಿಶೀಲಿಸಿ ಬೆಳೆಸಲಾಗುತ್ತದೆ. ಆದುದರಿಂದ ಇದನ್ನು ಯುಬಾರಿ ಪ್ರದೇಶದಲ್ಲಿ ಬೆಳೆಸಲಾಗುತ್ತದೆ. ಯಾಕೆಂದರೆ ಇಲ್ಲಿ ಜ್ವಾಲಾಮುಖಿ ಮಣ್ಣಿನಲ್ಲಿ ಹಗಲು-ರಾತ್ರಿ ತಾಪಮಾನದಲ್ಲಿ ಇರುವ ವ್ಯತ್ಯಾಸವೇ ಕಾರಣವಾಗಿದೆ. ಈ ವಿಶೇಷ ಹಣ್ಣಿನ ಬೆಲೆ ಅಂತೂ ಕೇಳಿದರೆ ಶಾಕ್ ಆಗ್ತಿರಾ? ಒಂದು ಜೋಡಿ ಯುಬಾರಿ ಕಿಂಗ್ ಕಲ್ಲಂಗಡಿಗಳು ಸುಮಾರು 33 ರಿಂದ 35 ಲಕ್ಷ ರೂಗಳವರೆಗೆ ಮಾರಾಟವಾಗಿದೆ.
ಕರಾವಳಿ ಹಾಗೂ ಮಲೆನಾಡಿನ ಕೆಲವೆಡೆ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆಯಿದ್ದು, ಅ.9…
ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಸಕ್ರಿಯವಾಗಿದ್ದು, ಕರಾವಳಿ ಮತ್ತು ಮಲೆನಾಡು ಸೇರಿದಂತೆ ಹಲವೆಡೆ ಉತ್ತಮ…
ರಾಜ್ಯದಲ್ಲಿ ಸದ್ಯ ಯಾವುದೇ ರೀತಿಯ ವಿದ್ಯುತ್ ಲೋಡ್‌ಶೆಡ್ಡಿಂಗ್ ಇಲ್ಲ ಎಂದು ಇಂಧನ ಸಚಿವ…
2027-28ನೇ ಸಾಲಿನಲ್ಲಿ ನವೋದಯ ವಿದ್ಯಾಲಯಗಳ 9 ಮತ್ತು 11ನೇ ತರಗತಿಯ ಖಾಲಿ ಸ್ಥಾನಗಳಿಗೆ…
1973ರ ಅಡಿಕೆ ಮಾರುಕಟ್ಟೆ ಬಿಕ್ಕಟ್ಟು ಉತ್ಪಾದನೆ ಹೆಚ್ಚಳಕ್ಕೆ ತಕ್ಕಂತೆ ಮಾರುಕಟ್ಟೆ ಹೀರಿಕೊಳ್ಳುವ ಸಾಮರ್ಥ್ಯವೂ…
ಅರಬ್ಬಿ ಸಮುದ್ರದ ಉಡುಪಿ–ದಕ್ಷಿಣ ಕನ್ನಡ ಕರಾವಳಿ ಸಮೀಪ ರೂಪುಗೊಂಡಿರುವ ಮೇಲ್ಮೈ ಸುಳಿಗಾಳಿಯಿಂದ ಕರಾವಳಿ,…