ಇದೊಂದು ಗೋವಿನ ಕಥೆ. ರಸ್ತೆ ಬದಿಯಲ್ಲಿ ಕಾಲು ಮುರಿದು ಬಿದ್ದ ಸ್ಥಿತಿಯಲ್ಲಿದ್ದ ಹೋರಿಯನ್ನು ಗೋಪ್ರೇಮಿಗಳು ರಕ್ಷಣೆ ಮಾಡಿದ್ದರು. ಇದೀಗ ಈ ಗೋವಿಗೆ ಪ್ಲಾಸ್ಟರ್ ಹಾಕಿ ಬ್ಯಾಂಡೇಜ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಗೋವಿಗೂ ಈಗ ವಿಶ್ರಾಂತಿ. 24 ದಿನಗಳಿಂದ ನಿರಂತರ ಚಿಕಿತ್ಸೆ ಮುಂದುವರಿದಿದೆ.
ಗೋವು ಎಂದರೆ ಪ್ರೀತಿ ಮಾತ್ರವಲ್ಲ ಕೃಷಿಕರಿಗೆ ಅದೊಂದು ಭಾವನಾತ್ಮಕ ಸಂಬಂಧ. ಹಾಗಿದ್ದರೂ ಹೋರಿಗಳು ಕಟುಕರ ಪಾಲಾಗುವುದು ಇದ್ದೇ ಇದೆ. ಅದೇಗೋ ಸುಬ್ರಹ್ಮಣ್ಯದ ಬಳಿ ಕಾಲು ಕಟ್ಟಿದ ಸ್ಥಿತಿಯಲ್ಲಿ ರಸ್ತೆ ಬದಿ ಬಿದ್ದಿದ್ದ ಹೋರಿಯ ಕಾಲು ಮುರಿದುಕೊಂಡಿತ್ತು. ಸ್ಥಳೀಯರು ಹಾಗೂ ಗೋಪ್ರೇಮಿಗಳು ರಕ್ಷಣೆ ಮಾಡಿದರು. ಆ ಬಳಿಕ ಪಶುವೈದ್ಯ ಡಾ.ವೆಂಕಟಾಚಲಪತಿ ಅವರ ಮೂಲಕ ಚಿಕಿತ್ಸೆ ನಡೆಯಿತು.
ಈಗ ಗೋವಿನ ಕಾಲು ಸರಿ ಮಾಡುವುದಕ್ಕೆ ಪ್ಲಾಸ್ಟರ್ ಹಾಕಿ ಮಲಗಿಸಲಾಗಿದೆ. ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗೂ ಅತ್ಯಂತ ಚೆನ್ನಾಗಿ ಚಿಕಿತ್ಸೆ ನೀಡಲಾಗುತ್ತಿದೆ. ತುಂಡಾದ ಕಾಲಿಗೆ ಪ್ಲಾಸ್ಟರ್ ಹಾಕಿ ಕಾಲು ಕಟ್ಟಲಾಗಿದೆ. ಸದ್ಯ ಸುಬ್ರಹ್ಮಣ್ಯದ ಕಲ ವಿಲೇವಾರಿ ಘಟಕದ ಬಳಿಯಲ್ಲಿ ಆಶ್ರಯ ಪಡೆದಿರುವ ಈ ಹೋರಿಗೆ ಸ್ಥಳೀಯರು ಹುಲ್ಲು, ನೀರು ನೀಡುತ್ತಾರೆ, ಪಶುವೈದ್ಯ ಡಾ.ವೆಂಕಟಾಚಲಪತಿ ನಿತ್ಯವೂ ಆಗಮಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ( ವಿಡಿಯೋ ಇಲ್ಲಿದೆ….. )
ಮನುಷ್ಯರಷ್ಟೇ ಕೇರ್ ತೆಗೆದುಕೊಂಡು ಚಿಕಿತ್ಸೆ ನೀಡುವುದು ಗೋ ಪ್ರೇಮಿಗಳಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಬದುಕುವ ಹಕ್ಕಿದೆ ಎನ್ನುವುದನ್ನು ವೈದ್ಯರು ಸಾರಿ ಹೇಳಿದರೆ, ರಕ್ಷಣೆಯ ಬಳಿಕ ನಿತ್ಯವೂ ಹುಲ್ಲು, ನೀರು ನೀಡುವ ಆ ತಂಡ ನಿಜವಾದ ಗೋಸೇವೆಯಲ್ಲಿ ಈಗ ತೊಡಗಿಸಿಕೊಂಡಿದೆ. ಕಳೆದ 24 ದಿನಗಳಿಂದ ಡಾ.ವೆಂಕಟಾಚಲಪತಿ, ಅಂಬರೀಶ್ ಹಾಗೂ ಸ್ಥಳೀಯರಾದ ಶೇಖರ ಸುಬ್ರಹ್ಮಣ್ಯ, ಶರತ್ ಕೊಲ್ಲಮೊಗ್ರ, ಅಶ್ವತ್ಥ್ ಬಿಳಿನೆಲೆ ಸೇವೆ ಮಾಡುತ್ತಿದ್ದಾರೆ.
ಕಡಲ ತೀರದ ಸ್ವಚ್ಛತೆಯ 100ನೇ ವಾರದ 'ಕ್ಲೀನ್ ಕಿನಾರ' ಕಾರ್ಯಕ್ರಮಕ್ಕೆ ಶಾಸಕ ಗುರುರಾಜ್…
ಗುಜ್ಜೆ ಚಟ್ನಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ: ಗುಜ್ಜೆ 3/4 ಕಪ್ ,ನೀರು…
2025ರಲ್ಲಿ ಮಂಗಳ ಗ್ರಹವು ವಿವಿಧ ನಕ್ಷತ್ರಗಳಲ್ಲಿ ಸಂಚಾರ ಮಾಡುವುದರಿಂದ ಕೆಲ ರಾಶಿಗಳಿಗೆ ವಿಶೇಷ…
ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಮೂರು ದಿನಗಳ…
ಈಗಿನಂತೆ ಎಪ್ರಿಲ್ 29 ಹಾಗೂ 30 ರಂದು ಮಳೆ ಸ್ವಲ್ಪ ಕಡಿಮೆ ಇರುವ…
ಬೆಟ್ಟಗುಡ್ಡಗಳಲ್ಲಿ ಬೆಳೆಯಲಾಗುವ ಸೇಬನ್ನು ಕರ್ನಾಟಕದಲ್ಲಿಯೂ ಬೆಳೆಯಲಾಗುತ್ತಿದೆ ಎಂದು ಮನ್ ಕಿ ಬಾತ್‌ನಲ್ಲಿ ಪ್ರಧಾನಿ…