ಹೆಂಗಳೆಯರ ಮೈ-ಮನವೆಲ್ಲಾ ಚಿನ್ನದ್ದೇ ಯೋಚನೆ. ಚಿನ್ನGold ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಬೆಲೆ ಗಗನಕ್ಕೇರುತ್ತಿದ್ದರೂ ಚಿನ್ನದ Gold Price ಮೇಲಿನ ವ್ಯಾಮೋಹ ಮಾತ್ರ ಕಡಿಮೆಯಾಗದೇ ಅದು ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ಆದರಲ್ಲೂ ಹೂಡಿಕೆದಾರರು Gold Investment ಮತ್ತು ಆಭರಣ ಪ್ರಿಯರು ಚಿನ್ನದ ಬೆಲೆ ಇಳಿಕೆಯಾಗೋದನ್ನು ಕಾಯುತ್ತಿರುತ್ತಾರೆ.
ನಮ್ಮ ರಾಜ್ಯದಲ್ಲಿಯೇ ಅತ್ಯಧಿಕ ಚಿನ್ನ ಉತ್ಪಾದನೆ Gold Production ಆಗುತ್ತೆ ಅನ್ನೋ ವಿಷಯ ಎಲ್ಲರಿಗೂ ತಿಳಿದಿರುವ ವಿಚಾರ. ರಾಯಚೂರು Raichur ಜಿಲ್ಲೆಯ ಲಿಂಗಸ್ಗೂರು ತಾಲೂಕಿನ ಹಟ್ಟಿ ಎಂಬಲ್ಲಿ ಚಿನ್ನ ಉತ್ಪಾದನೆ ಮಾಡಲಾಗುತ್ತದೆ. ಈ ಬಾರಿ ಅಂದ್ರೆ ಆಗಸ್ಟ್ ತಿಂಗಳಲ್ಲಿ ಹಟ್ಟಿ ಚಿನ್ನದ ಗಣಿಯಿಂದ ಅತ್ಯಧಿಕ ಬಂಗಾರವನ್ನು ಉತ್ಪಾದಿಸಲಾಗಿದೆ. 2023-24ರ ಆರ್ಥಿಕ ವರ್ಷದಲ್ಲಿ ಇದು ಅತ್ಯಧಿಕ ಚಿನ್ನದ ಉತ್ಪಾದನೆ ಎಂದು ವರದಿಯಾಗಿದೆ. ಸರ್ಕಾರಿ ಸ್ವಾಮ್ಯದ ಹಟ್ಟಿ ಚಿನ್ನದ ಕಂಪನಿ ಈ ವರ್ಷ ಅಂದ್ರೆ 2023-24ರಲ್ಲಿ 1,800 ಕೆಜಿ ಬಂಗಾರ ಉತ್ಪಾದನೆಯ ಗುರಿಯನ್ನು ಹೊಂದಿದೆ. ಆಗಸ್ಟ್ನಲ್ಲಿಯೇ ಬರೋಬ್ಬರಿ 100 ಕೆಜಿಗೂ ಅಧಿಕ ಚಿನ್ನವನ್ನು ಉತ್ಪಾದಿಸಲಾಗಿದೆ. ಈ ವರ್ಷ ಏಪ್ರಿಲ್ನಿಂದ ಜುಲೈವರೆಗೆ ಅಂದರೆ 5 ತಿಂಗಳ ಅವಧಿಯಲ್ಲಿ 501.865 ಕೆಜಿ ಚಿನ್ನವನ್ನು ಉತ್ಪಾದಿಸಲಾಗಿದೆ. ಈ ಐದು ತಿಂಗಳಲ್ಲಿ ಚಿನ್ನದ ಉತ್ಪಾದನೆ 100 ಕೆಜಿ ದಾಟಿರಲಿಲ್ಲ. ಆಗಸ್ಟ್ನಲ್ಲಿ 110.600 ಕೆಜಿ ಚಿನ್ನ ಉತ್ಪಾದಿಸುವ ಮೂಲಕ ಹಟ್ಟಿ ಚಿನ್ನದ ಗಣಿ ವಿಶೇಷ ದಾಖಲೆಯನ್ನು ಬರೆದಿದೆ. 48,914 ಮೆಟ್ರಿಕ್ ಟನ್ ಅದಿರು ಸಂಸ್ಕರಿಸಿದಾಗ 110.600 ಕೆಜಿ ಚಿನ್ನ ಹೊರ ಬಂದಿದೆ.
ಅಂತರ್ಜಾಲ ಮಾಹಿತಿ
ಬಂಗಾಳಕೊಲ್ಲಿಯ ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಉಂಟಾಗಲಿರುವ ವಾಯುಭಾರ ಕುಸಿತವು ನಾಳೆ ಬಂಗ್ಲಾ ದೇಶದ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ…
ಮಳೆಯ ಕಾರಣದಿಂದ ಪೆರಿಯಾರ್ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಹೀಗಾಗಿ ಆಲುವಾ ಶಿವ ದೇವಾಲಯದ…
ಬಂಗಾಳಕೊಲ್ಲಿಯ ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಉಂಟಗಿರುವ ವಾಯುಭಾರ ಕುಸಿತವು ಮುಂದಿನ 3 ಅಥವಾ…
ಅಡಿಕೆಯ ಬಹು ಪಾಲು ಬೀಡ, ಸಿಹಿ ಸುಪಾರಿ, ಗುಟ್ಕಾ,ಪಾನ್ ಮಸಾಲ ಇತ್ಯಾದಿಗಳ ತಯಾರಿಯಲ್ಲಿ…