ಕೆಲ ಕಾಲಗಳಿಂದ ಸ್ಥಗಿತಗೊಂಡಿದ್ದ ರೈಲ್ವೆ ಸಂಚಾರದ ವ್ಯವಸ್ಥೆ ಪುನರಾರಂಭಕ್ಕೆ ಕೇಂದ್ರ ಸರ್ಕಾರ ಸಜ್ಜಾಗಿದೆ. ರೈಲ್ವೆ ಸಂಚಾರದ ಅನ್ ಲಾಕ್ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದಂತೆಯೇ ಪ್ರಯಾಣಿಕರಿಗೆ ಸಹಾಯವಾಗುವಂತೆ ಬಸ್ ಸಂಚಾರದ ವ್ಯವಸ್ಥೆಯು ಮಾಡಲಾಗುವುದು ಎಂದು ಹೇಳಲಾಗುತ್ತಿದೆ. ಕೆಲವೇ ದಿನಗಳಲ್ಲಿ ಬರಲಿರುವ ಹಬ್ಬಗಳನ್ನು ಗಮನದಲ್ಲಿರಿಸಿಕೊಂಡು ವ್ಯವಸ್ಥೆಯನ್ನು ಆಯೋಜಿಸಲಾಗಿದೆ.
ಒಟ್ಟು 200 ರೈಲುಗಳ ಸಂಚಾರಕ್ಕೆ ಅನುಮತಿ ನೀಡಲು ರೈಲ್ವೆ ಇಲಾಖೆ ಈ ಹಿಂದೆ ಸಜ್ಜಾಗಿತ್ತು. ಅದರ ಪೂರ್ವಭಾಗದ ಸಿದ್ಧತೆಯಂತೆ 39 ವಿಶೇಷ ರೈಲುಗಳನ್ನು ಬಿಡುವಂತೆ ಇದೀಗ ಇಲಾಖೆ ಸೂಚಿಸಿದೆ. ಅಕ್ಟೋಬರ್ 15ರಿಂದ ಈ ವಿಶೇಷ ರೈಲು ಸಂಚಾರ ಪ್ರಾರಂಭವಾಗಲಿದೆ ಎನ್ನಲಾಗುತ್ತಿದೆ.
ಈ ವಿಶೇಷ ರೈಲುಗಳು, ದೇಶದೆಲ್ಲೆಡೆ ಸಂಚಾರ ಮಾಡಲಿದ್ದು, ಇದರಲ್ಲಿ ಬಹುತೇಕ ರೈಲುಗಳು ಎಕ್ಸ್‌ಪ್ರೆಸ್ ರೈಲುಗಳು. ಇನ್ನು ಕರ್ನಾಟಕದಲ್ಲಿ 5 ರೈಲುಗಳನ್ನು ಬಿಡಲಾಗುತ್ತಿದ್ದು, ರೈಲುಗಳು 3 ವಾರಕ್ಕೊಮ್ಮೆ ಸಂಚಾರ ಮಾಡಲಿವೆ. ಚೆನ್ನೈ-ಬೆಂಗಳೂರು ಡಬಲ್ ಡೆಕ್ಕರ್ ಪ್ರತಿದಿನ ಸಂಚಾರ ಮಾಡಲಿದ್ದು, ಬೆಂಗಳೂರು-ಚೆನ್ನೈ ಶತಾಬ್ದಿ ಎಕ್ಸ್‌ಪ್ರೆಸ್ ಮಂಗಳವಾರ ಒಂದು ದಿನ ಹೊರತುಪಡಿಸಿ ಉಳಿದ ದಿನ ಸಂಚರಿಸಲಿದೆ.
ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ 16 ಸ್ಥಳಗಳಲ್ಲಿ ವಿದೇಶಿ ಅಡಿಕೆ ಅಕ್ರಮ ಸಾಗಾಟಕ್ಕೆ…
ಉತ್ತರ ಭಾರತದ ಶುಷ್ಕ ಗಾಳಿ ಹಾಗೂ ಪೆಸಿಫಿಕ್ ಸಾಗರದ ಪ್ರಬಲ ಚಂಡಮಾರುತಗಳ ಪರಿಣಾಮ…
ಹೊಸ ಅಡಿಕೆಯ ಆರಂಭಿಕ ಧಾರಣೆ ₹330–350ಕ್ಕೆ ನಿಗದಿಯಾಗಿದ್ದು, ಆಮದು ಅಡಿಕೆಗೆ ಇರುವ ₹351ರ…
ಪದವಿ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿವೇತನಕ್ಕೆ…
ಕರ್ನಾಟಕದಲ್ಲಿ ಬೀಜದಿಂದ ಗ್ರಾಹಕರ ತಟ್ಟೆಯವರೆಗೆ ಕೃಷಿ ಉತ್ಪನ್ನದ ಪಯಣವನ್ನು ಪತ್ತೆಹಚ್ಚಲು AI ಆಧಾರಿತ…
ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಒಂದೇ ದಿನ 4 ಚಿನ್ನ ಸೇರಿದಂತೆ 7 ಪದಕ…