ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲಿನ ಸೂಪರ್‌ಮಾರ್ಕೆಟ್ ಸೇರಿದಂತೆ ದೇಶದ ಬಹುತೇಕ ಕಡೆಗಳಲ್ಲಿ ತರಕಾರಿಗಳ ಬೆಲೆ ದುಪ್ಪಟ್ಟಾಗಿದೆ. ಪ್ರತಿ ಕೆ.ಜಿ ಅಕ್ಕಿಗೆ 220 ರೂ ಇದೆ. ಗೋಧಿ ಕೆ.ಜಿ ಗೆ 190 ರೂಪಾಯಿಯಂತೆ ಮಾರಾಟವಾಗುತ್ತಿದೆ.
ಶ್ರೀಲಂಕಾದಲ್ಲಿ ಸಾಲ ಹೆಚ್ಚಾಗಿದ್ದು, ವಿದೇಶಿ ಮೀಸಲು ಸಂಗ್ರಹ ಕಡಿಮೆಯಾಗುತ್ತಿದೆ. ಫೆಬ್ರವರಿಯಲ್ಲಿ ಚಿಲ್ಲರೆ ಹಣದುಬ್ಬರ ಶೇ 17.5ಕ್ಕೆ ತಲುಪಿತ್ತು. ಆಹಾರ ಹಣದುಬ್ಬರ ಶೇಕಡಾ 25 ದಾಟಿತ್ತು. ಇದರಿಂದಾಗಿ ಆಹಾರ ಹಾಗೂ ದವಸ ಧಾನ್ಯಗಳ ಬೆಲೆ ಗಗನಕ್ಕೇರಿದೆ.ರಾಜಧಾನಿ ಕೊಲಂಬೊದಲ್ಲಿನ ಸೂಪರ್‌ಮಾರ್ಕೆಟ್ ಸೇರಿದಂತೆ ದೇಶದ ಬಹುತೇಕ ಕಡೆಗಳಲ್ಲಿ ತರಕಾರಿಗಳ ಬೆಲೆ ದುಪ್ಪಟ್ಟಾಗಿದೆ. ಪ್ರತಿ ಕೆ.ಜಿ ಅಕ್ಕಿಗೆ 220 ರೂ ಇದ್ದು, ಗೋಧಿ ಕೆ.ಜಿಗೆ 190 ರೂಪಾಯಿಯಂತೆ ಮಾರಾಟವಾಗುತ್ತಿದೆ. ಒಂದು ಕಿಲೋಗ್ರಾಂ ಸಕ್ಕರೆ 240 ರೂ. ಆಗಿದ್ದು, ತೆಂಗಿನ ಎಣ್ಣೆಗೆ ಲೀಟರ್‌ಗೆ 850 ರೂ.ನಂತೆ ಸಿಗುತ್ತಿದೆ. ಒಂದು ಮೊಟ್ಟೆಗೆ 30 ರೂ. ಇದೆ, ಅಷ್ಟೇ ಅಲ್ಲ, 1 ಕೆಜಿ ಹಾಲಿನ ಪುಡಿ ಬರೋಬ್ಬರಿ 1,900 ರೂ.ಗೆ ಮಾರಾಟವಾಗುತ್ತಿದೆ. ಹಾಲು, ಬ್ರೆಡ್ ಕೂಡಾ ದುಬಾರಿಯಾಗಿದೆ. ಪ್ರವಾಸೋದ್ಯಮವೇ ಹೆಚ್ಚು ಆದಾಯದ ಕ್ಷೇತ್ರವಾಗಿದ್ದ ಶ್ರೀಲಂಕಾದಲ್ಲಿ ಕಳೆದ ಎರಡು ವರ್ಷಗಳಿಂದ ಸಂಕಷ್ಟ ಎದುರಾಗಿದೆ.
ಅಡಿಕೆ ಸಿಪ್ಪೆ, ಸೋಗೆ ಮತ್ತು ಇತರ ಕೃಷಿ ಅವಶೇಷಗಳಿಂದ ಕಾರ್ಬನ್ ನ್ಯಾನೋಸ್ಫಿಯರ್ಗಳನ್ನು ಅಭಿವೃದ್ಧಿಪಡಿಸಿ,…
ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಬೆಳ್ಳಾರೆ…
ಸುಬ್ರಹ್ಮಣ್ಯದಲ್ಲಿ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಹೋಮಿಯೋಕೇರ್ ಗುತ್ತಿಗಾರಿಗೆ ಸ್ಥಳಾಂತರಗೊಂಡಿದ್ದು, ಎಸ್ಎಂಎಸ್ಜಿ ಕಾಂಪ್ಲೆಕ್ಸ್ನಲ್ಲಿ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಗುಡುಗು…
ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…