ಪುಣ್ಯಕ್ಷೇತ್ರದ ಸ್ವಚ್ಛತೆಗೆ ಎಲ್ಲಾ ಭಕ್ತಾದಿಗಳ ಕೊಡುಗೆ ಅಗತ್ಯ ಇದೆ. ಕ್ಷೇತ್ರದಲ್ಲಿ ಸ್ವಚ್ಛತೆಯತ್ತ ಭಕ್ತಾದಿಗಳು ಆದ್ಯತೆ ನೀಡಲೇಬೇಕಿದೆ. ಈಚೆಗೆ ಕುಂಭ ಮೇಳದಲ್ಲಿ ಸ್ವಚ್ಛತೆಯ ಬಗ್ಗೆಯೂ ಚರ್ಚೆಯಾಗಿತ್ತು. ಈ ಹಿನ್ನೆಲೆಯನ್ನೂ ಗಮನಿಸಿದರೆ ದೇಶದ ಎಲ್ಲಾ ಪುಣ್ಯ ಕ್ಷೇತ್ರದಲ್ಲೂ ಸ್ವಚ್ಛತೆಯತ್ತ ಗಮನಹರಿಸಬೇಕು… ಇದೀಗ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಇಲ್ಲಿನ ನಮ್ಮಸುಬ್ರಹ್ಮಣ್ಯ ತಂಡವು ವಿಷಾದಕರವಾದ ಸಂಗತಿಯೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ.………ಮುಂದೆ ಓದಿ……..
ಭಾನುವಾರ ಮಧ್ಯಾಹ್ನ ಕುಕ್ಕೆ ಸುಬ್ರಹ್ಮಣ್ಯದ ಆಟೋ ಚಾಲಕರೊಬ್ಬರು ಕುಮಾರಧಾರ ಸೇತುವೆ ಬಳಿ ಹೋಗುವಾಗ, ಸೇತುವೆ ಮೇಲೆ ವಾಹನ ನಿಲ್ಲಿಸಿ ನದಿಗೆ ತ್ಯಾಜ್ಯ ಎಸೆಯುವ ವ್ಯಕ್ತಿಯನ್ನು ಕಂಡು, ಅವರನ್ನು ತಡೆಯುವ ಪ್ರಯತ್ನ ಮಾಡುತ್ತಾರೆ. ಯಾರೋ ಜ್ಯೋತಿಷಿ ತಮ್ಮ ಹಳೆಯ ಬಟ್ಟೆ-ಬರೆಗಳನ್ನು ನದಿಗೆ ಎಸೆಯುವಂತೆ ಹೇಳಿದ್ದಾರೆ ಎಂದು ಉತ್ತರಿಸುತ್ತಾರೆ. ಹಳೆಯ ಬಟ್ಟೆಗಳನ್ನು ತುಂಬಿದ ಮೂರು ಚೀಲಗಳನ್ನು ನದಿಗೆ ಎಸೆದ ಬಳಿಕ, ಆಟೋ ಚಾಲಕರು ಆತನ ಪೋಟೋ ತೆಗೆಯುವಾಗ ಉತ್ತಮ ಕೆಲಸ ಮಾಡಿದಂತೆ ಫೋಟೋಗೆ ಪೋಸ್ ಕೂಡಾ ನೀಡಿದ್ದಾರೆ…!
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಪೂಜೆ ಸಲ್ಲಿಸಿ, ಅದೇ ದೇವರ ನದಿಗೆ ಬಟ್ಟೆ ಎಸೆದು ಮಲಿನಗೊಳಿಸಿದರೆ, ಪೂಜೆಯ ಫಲ ಪಡೆಯುವುದಕ್ಕಿಂತ ಪಾಪ ಕಟ್ಟಿಕೊಳ್ಳಬೇಕಾಗುತ್ತದೆ. ಹೀಗೆಂದು ನಮ್ಮ ಸುಬ್ರಹ್ಮಣ್ಯ ಪೇಸ್‌ಬುಕ್ ಪೇಜಿನಲ್ಲಿ ಪೋಸ್ಟ್ ಮಾಡಲಾಗಿದೆ.
ನಮ್ಮ ಸುಬ್ರಹ್ಮಣ್ಯ ತಂಡವು ಕಳೆದ ಅನೇಕ ಸಮಯಗಳಿಂದ ಸುಬ್ರಹ್ಮಣ್ಯದ ಸ್ವಚ್ಛತೆಯ ಬಗ್ಗೆ ಗಮನಹರಿಸುತ್ತಿದೆ. ಎರಡು ವರ್ಷಗಳ ಹಿಂದೆ ಪ್ರತೀ ಭಾನುವಾರ ಸ್ವಚ್ಛತಾ ಕೆಲಸ ನಡೆಸುವ ಮೂಲಕ ಜಾಗೃತಿ ಮೂಡಿಸಿತ್ತು. ಅದಾದ ಬಳಿಕ ಕಸ ಎಸೆಯದಂತೆ ಭಕ್ತಾದಿಗಳಿಗೆ ಮನವಿ ಮಾಡುತ್ತಿದೆ. ಕುಮಾರಧಾರಾ ನದಿಯಲ್ಲೂ ಬಟ್ಟೆಗಳ ರಾಶಿ ಪ್ರತೀ ತಿಂಗಳು ಲಭ್ಯವಾಗುತ್ತಿದೆ.
ರಾತ್ರಿ ಗುಡುಗು ಸಹಿತ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಈಗಿನಂತೆ ಕರಾವಳಿಯಲ್ಲಿ…
ಈ ತಿಂಗಳ ಅಂತ್ಯದೊಳಗೆ ಮೀನ ಕಟಕ ಕುಂಭ ಮಿಥುನ ವೃಶ್ಚಿಕ ವೃಷಭ ಈ…
ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ನೆಲೆಗಳ…
ಯುದ್ಧ ಆದರೆ ಅಥವಾ ಬಿಗುವಿನ ವಾತಾವರಣ ನಿರ್ಮಾಣವಾದರೆ ತಾತ್ಕಾಲಿಕವಾಗಿ ಎಲ್ಲಾ ಉತ್ಪನ್ನಗಳ ಮಾರುಕಟ್ಟೆಗಳು…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490