ಬೆಳ್ಳಾರೆ : ಕಳಂಜ ಗ್ರಾಮದ ಕೋಟೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ನಡೆಯಿತು.
ಬ್ರಹ್ಮಶ್ರೀ ವೇ|ಮೂ ನೀಲೇಶ್ವರ ದಾಮೋದರ ತಂತ್ರಿಗಳ ಮಾರ್ಗದರ್ಶನದೊಂದಿಗೆ ಬ್ರಹ್ಮಶ್ರೀ ವಿಷ್ಣು ಭಟ್ ಪಟ್ಟೇರಿ ನೇತೃತ್ವದಲ್ಲಿ ಗಣಪತಿ ಹೋಮ, ದೃಢಕಲಶ ಪೂಜೆ, ಕಲಶಾಭಿಷೇಕ ಹಾಗೂ ಮಹಾಪೂಜೆ ನಡೆಯಿತು. ದೇವಳದ ಭಕ್ತರಿಂದ ಏಕಾದಶ ರುದ್ರಾಭಿಷೇಕ ಹಾಗೂ ಕಲಶಪೂಜೆ ನೆರವೇರಿತು.
ಆಡಳಿತ ಧರ್ಮದರ್ಶಿ ಸೀತಾರಾಮ ಕೋಟೆ, ಧರ್ಮದರ್ಶಿಗಳಾದ ವಾರಣಾಶಿ ಗೋಪಾಲಕೃಷ್ಣ ಭಟ್, ಕೆದ್ಲ ನರಸಿಂಹ ಭಟ್ ಹಾಗೂ ಆಡಳಿತ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಅರ್ಚಕ ಮಂಜುನಾಥ ಭಟ್ ಹಾಗೂ ಪವನ ವೆಂಕಟ್ರಮಣ ಭಟ್ ಸಹಕರಿಸಿದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel