ಬೆಳ್ಳಾರೆ: 70 ವರ್ಷದ ಈ ವೃದ್ಧ ದಂಪತಿಗಳಿಗೆ ಬೇಕಿದೆ ಆಸರೆ. ಅಮರಪಡ್ನೂರು ಗ್ರಾಮದ ಶೇಣಿ ಸಮೀಪ ಕುಳ್ಳಾಜೆಯಲ್ಲಿ ವಾಸ್ತವ್ಯವಿರುವ ಮಾಣಿಕ(78) , ಬೊಳ್ಳೆಚ್ಚಿ(70) ದಂಪತಿಗಳು 35 ವರ್ಷದಿಂದ ಈ ಸ್ಥಳದಲ್ಲಿ ಪಕ್ಕಾ ಸೂರಿಲ್ಲದೇ ಬದುಕುತ್ತಿದ್ದಾರೆ. ಈಗಲಾದರೂ ಪಕ್ಕಾ ಸೂರು ದೊರಕಿ ಸರಕಾರದ ಸವಲತ್ತು ವೃದ್ದ ದಂಪತಿಗೆ ದೊರೆಯುವಂತಾಗಲಿ ಎಂಬ ಆಶಯ ಸ್ಥಳೀಯರದ್ದು.
ಅಮರಪಡ್ನೂರು ಗ್ರಾಮದ ಶೇಣಿ ಸಮೀಪ ಕುಳ್ಳಾಜೆಯಲ್ಲಿ ವಾಸ್ತವ್ಯವಿರುವ ಮಾಣಿಕ ಅವರ ಕುಟುಂಬಕ್ಕೆ 70 ವರ್ಷ ಹಿಂದೆ ಸರಕಾರದಿಂದ ಮಂಜೂರಾದ 4:40 ಎಕ್ರೆ ಸ್ಥಳ ಇತ್ತು. ಅದು ಮಾಣಿಕ ಅವರ ಸಹೋದನ ಹೆಸರಿನಲ್ಲಿದೆ. ಸಹೋದರ ಈಗಾಗಲೇ ಮೃತಪಟ್ಟಿದ್ದು ಅವರ ಮಕ್ಕಳು ಇದೇ ಸ್ಥಳದ ಇನ್ನೊಂದು ಕಡೆ ಕಚ್ಚಾ ಸೂರಿನಲ್ಲಿದ್ದಾರೆ. ತೀರಾ ಕಡುಬಡವರಾದ ಮಾಣಿಕ ಅವರಿಗೆ ಒಬ್ಬ ಪುತ್ರನಿದ್ದು ಆತ ಉದ್ಯೋಗದ ನಿಮಿತ್ತ ದೂರದಲ್ಲಿ ವಾಸ್ತವ್ಯ ಹೊಂದಿದ್ದಾರೆ. ಇವರು ಜೀವನೋಪಾಯಕ್ಕೆ ಅಡಕೆ ಸುಲಿಯುವ ಮುಂತಾದ ಸಣ್ಣಪುಟ್ಟ ಕಾಯಕ ಮಾಡಿ ಜೀವನ ಸಾಗಿಸುತ್ತಿದ್ದಾರೆ. ವೃದ್ದಾಪ್ಯದಲ್ಲಿ ಆರೋಗ್ಯದ ಸಮಸ್ಯೆ ಕಾಡುತ್ತಿದ್ದು ಇವರ ಪತ್ನಿಗೆ ಇತ್ತಿಚೆಗೆ ಕಣ್ಣಿನ ಶಸ್ತ್ರ ಚಿಕಿತ್ಸೆಯಾಗಿದೆ. ವೃದ್ಧಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಲು ಅತ್ತಿತ್ತ ಓಡಾಡಿದ್ದು ಮಾತ್ರ. ಯಾವುದೆ ಫಲ ನೀಡಿಲ್ಲ. ಹೀಗಾಗಿ ಈ ಕುಟುಂಬಕ್ಕೆ ಸೌಲಭ್ಯ ಸಿಗುವಂತಾಗಲಿ ಎಂಬ ಆಶಯ ಸ್ಥಳೀಯರದ್ದು.
ಹೊಸರುಚಿಯ ಮೂಲಕ ಈ ವಾರ ಪಪಾಯ ಹಣ್ಣು ಬರ್ಫಿಯ ಬಗ್ಗೆ ಹೇಳಿದ್ದಾರೆ ಗೃಹಿಣಿ…
ರಾಮಸೀತೆಯರೊಂದಾಗಿ ಕುಶಲವರಿಗೆ ತಂದೆ ತಾಯಿ ಲಭಿಸಿದ ಘಳಿಗೆಯು ಎಲ್ಲರಿಗೂ ಸಂಭ್ರಮಯೋಗ್ಯವಾಗಿ ಕಾಣುತ್ತದೆ. ಹಾಗಾಗಿ…
ಅಲ್ಪಾವಧಿ ಬೆಳೆ ಸಾಲದ ಬಗ್ಗೆ ಕಳೆದ ವಾರ ತಿಳಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ…
ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ತೆರೆದಿರುವ 10…
ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ರೈತರು ತಮ್ಮ ಬೆಳೆಗಳಲ್ಲಿ ಹೆಚ್ಚಿನ ರಾಸಾಯನಿಕಗಳು…
ಕಾರವಾರದ ರವೀಂದ್ರನಾಥ್ ಟಾಗೋರ್ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ ಏಪ್ರಿಲ್ 18…