ಬೆಳ್ಳಾರೆ : ಬೆಳ್ಳಾರೆ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟ ನೆಟ್ಟಾರು ಬಸ್‍ನಿಲ್ದಾಣ ಉಪಯೋಗವಿಲ್ಲದೆ ಪಾಳು ಬಿದ್ದಿದ್ದು, ಕುಸಿಯುವ ಭೀತಿಯೂ ಇದೆ.
ಬಸ್ ನಿಲ್ದಾಣದ ಛಾವಣಿಯ ಪಕ್ಕಾಸು ಮುರಿದಿದ್ದು, ಹೆಂಚು ಹಾರಿ ಹೋಗಿದೆ. ಬಸ್ ನಿಲ್ದಾಣದ ಸುತ್ತಮುತ್ತ ಬೃಹತ್ ಪೊದೆಗಳು ಬೆಳೆದು ನಿಂತಿದ್ದು, ನಿಲ್ದಾಣವನ್ನು ಗುರುತಿಸುವುದೇ ಕಷ್ಟಸಾಧ್ಯವಾಗಿದೆ.
ಪುತ್ತೂರಿನಿಂದ ಬೆಳ್ಳಾರೆಗೆ ಹಾಗು ಪೆರ್ಲಂಪಾಡಿಯಿಂದ ಬೆಳ್ಳಾರೆಗೆ ಸಂಪರ್ಕಿಸುವ ನೆಟ್ಟಾರು ಜಂಕ್ಷನಿನಲ್ಲಿ ಇರುವ ಈ ಬಸ್‍ನಿಲ್ದಾಣ ಹಲವು ವರ್ಷಗಳಿಂದ ಪಾಳು ಬಿದ್ದ ಸ್ಥಿತಿಯಲ್ಲಿದ್ದರೂ ದುರಸ್ಥಿಗೊಳಿಸದಿರುವುದರಿಂದ ಪ್ರಯಾಣಿಕರು ರಸ್ತೆ ಬದಿಯಲ್ಲಿ ಬಸ್‍ಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪೆರ್ಲಂಪಾಡಿ ಹಾಗು ಮಾಡಾವು ಮೂಲಕವಾಗಿ ಪುತ್ತೂರಿಗೆ ಸಂಪರ್ಕ ಕಲ್ಪಿಸುವಲ್ಲಿ ನೆಟ್ಟಾರು ಪ್ರಮುಖ ಜಂಕ್ಷನ್ ಆಗಿದ್ದು, ದಿನಂಪ್ರತಿ ನೂರಾರು ಬಸ್‍ಗಳು ಸಂಚರಿಸುತ್ತವೆ. ಆದರೆ ಈಗಿರುವ ಬಸ್‍ನಿಲ್ದಾಣ ಯಾವ ಕಡೆಯಿಂದ ಬಸ್ ಬಂದರೂ ಉಪಯೋಗವಿಲ್ಲ ಎಂಬಂತಾಗಿದೆ. ಬಸ್ ನಿಲ್ದಾಣ ಒಂದು ಕಡೆಯಾದರೆ ಬಸ್ ನಿಲ್ಲುವುದೇ ಬೇರೆಯೇ ಕಡೆ. ಆದುದರಿಂದ ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ರಸ್ತೆ ಬದಿಯಲ್ಲಿಯೋ ಅಥವ ಸ್ಥಳಿಯ ಅಂಗಡಿಗಳ ಜಗಲಿಯಲ್ಲಿಯೋ ಬಸ್‍ಗಾಗಿ ಕಾಯುವುದು ಅನಿವಾರ್ಯವಾಗಿದೆ. ಬಸ್ ನಿಲ್ದಾಣವನ್ನು ಸರಿಯಾದೆಡೆಗೆ ಸ್ಥಳಾಂತರಿಸಿ ಅನುಕೂಲ ಮಾಡಿಕೊಡಲು ಸಾರ್ವಜನಿಕರು ಹಲವು ಬಾರಿ ಆಗ್ರಹಿಸಿದರೂ ಇದುವರೆಗೂ ಪ್ರಯೋಜನವಾಗಿಲ್ಲ.ಪ್ರಯಾಣಿಕರ ಬಸ್ ತಂಗುದಾಣ ಇದೀಗ ಕುಡುಕ್ಕರು ಹಾಗು ಭಿಕ್ಷುಕರ ಆಶ್ರಯ ತಾಣವಾಗಿದೆ.
ಅಂಚೆ ಕಚೇರಿಗೂ ಕಾದಿದೆ ಅಪಾಯ:
ಬಸ್ ನಿಲ್ದಾಣದ ಪಕ್ಕದಲ್ಲಿ ಮಣಿಕ್ಕಾರ ಅಂಚೆ ಕಛೇರಿ ಕಾರ್ಯಾಚರಿಸುತ್ತಿದ್ದು, ಬಸ್ ನಿಲ್ದಾಣದ ಛಾವಣಿ ಕುಸಿತದಲ್ಲಿ ಅಂಚೆ ಕಛೇರಿಗೂ ಅಪಾಯ ತಪ್ಪಿದ್ದಲ್ಲ. ಪ್ರಯಾಣಿಕರ ವಿಶ್ರಾಂತಿ ಕೊಠಡಿಯ ಛಾವಣಿ ಮೂಲಕ ನೀರು ಸೋರುತ್ತಿದೆ. ಛಾವಣಿ ಕುಸಿದು ಬಿದ್ದಲ್ಲಿ ಅಂಚೆ ಕಛೇರಿಯ ಕಡತಗಳಿಗೂ ಹಾನಿಯಾಗುವ ಅಪಾಯವಿದೆ.
ಕರ್ನಾಟಕದಲ್ಲಿ ಮಳೆಯ ಸಾಧ್ಯತೆ ಒಟ್ಟಾರೆ ಇಳಿಮುಖವಾಗುತ್ತಿದ್ದು, ಕರಾವಳಿಯಲ್ಲಿ ಸೆ.11ರಿಂದ ಮಳೆ ಕಡಿಮೆಯಾಗುವ ಲಕ್ಷಣಗಳಿವೆ.…
2025-26ರಲ್ಲಿ ಕ್ಯಾಂಪ್ಕೋದ ಅಡಿಕೆ ಖರೀದಿ ಪ್ರಮಾಣ ಹಿಂದಿನ ವರ್ಷಕ್ಕಿಂತ ಕಡಿಮೆಯಾಗಿದ್ದರೂ, ಬೆಲೆ ಏರಿಕೆಯಿಂದ…
ಅಸ್ಸಾಂನ ಗುಹಾಟಿ ಸಮೀಪದ 10 ಅರಣ್ಯ ಅಂಚಿನ ಗ್ರಾಮಗಳಲ್ಲಿ ಅಡಿಕೆ, ತೆಂಗು ಮತ್ತು…
ದೇಶದ ಪ್ರಸಕ್ತ ಮುಂಗಾರು ಬೆಳೆಗಳ ಬಿತ್ತನೆ ಪ್ರದೇಶ 1,086 ಲಕ್ಷ ಹೆಕ್ಟೇರ್ ದಾಟಿದ್ದರೂ…
ರಾಜ್ಯದಲ್ಲಿ ಜಾನುವಾರುಗಳಿಗೆ ಪೌಷ್ಟಿಕ ಪೂರಕ ಮೇವು ಒದಗಿಸಲು ₹3.78 ಕೋಟಿ ವೆಚ್ಚದಲ್ಲಿ 12…
ಕರಾವಳಿಯಲ್ಲಿ ಮೋಡದ ವಾತಾವರಣ ಹೆಚ್ಚಾಗಿದ್ದು, ಮಧ್ಯಾಹ್ನದ ನಂತರ ತೀರ ಮತ್ತು ಘಟ್ಟದ ಕೆಳಭಾಗಗಳಲ್ಲಿ…