Advertisement
MIRROR FOCUS

ಪರೀಕ್ಷೆ ಭಯದ ನಂತರ ಈಗ ರಿಸಲ್ಟ್‌ ಭಯ | ಫೇಲ್‌, ಕಡಿಮೆ ಅಂಕ ಚಿಂತೆ ಬಿಡಿ | ಮಕ್ಕಳ ಜೊತೆ ನಿಲ್ಲಿ ಪೋಷಕರೇ..

Share

ಮಕ್ಕಳ(Children) ಪಾಲಿಗೆ ಪರೀಕ್ಷೆ(Exam) ಅನ್ನೋದು ಕಬ್ಬಿಣದ ಕಡಲೇ ಕಾಯಿ. ಜೀವನದ ಪ್ರಮುಖ ಘಟ್ಟಗಳು ಹೌದು, ಹತ್ತನೇ ತರಗತಿ(SSLC) ಹಾಗೂ ಪಿಯುಸಿಯಲ್ಲಿ(PUC) ಮಕ್ಕಳು ಅಗತ್ಯವಾಗಿ ಪರೀಕ್ಷೆಗಳನ್ನು ಎದುರಿಸಲೇ ಬೇಕು. ಹೆಚ್ಚಿನ ಅಂಕ(Marks) ಗಳಿಸಿದರೆ ಅವರ ಮುಂದಿನ ಕಲಿಕೆಯ ಹಾದಿ ಸುಗಮವಾಗುತ್ತದೆ. ಹಾಗಾಂತ ಎಲ್ಲಾ ಮಕ್ಕಳು ಜಾಸ್ತಿ ಅಂಕಗಳನ್ನೇ ಪಡೆಯೋದು ಅಸಾಧ್ಯ. ಅದನ್ನು ಪೋಷಕರು(Parents) ಹಾಗೂ ಮಕ್ಕಳು , ಹಾಗೇ ಶಿಕ್ಷಕರು(Teachers) ಅರಿತಿರಬೇಕು. ಪರೀಕ್ಷೆಯಲ್ಲಿ ಪಾಸು ಫೇಲ್(Pass-Fail) ಆಗೋದು ಸಾಮಾನ್ಯ. ಪಾಸ್ ಆದವ್ರು ಬುದ್ದಿವಂತರಲ್ಲ, ಫೇಲ್ ಆದವರು ದಡ್ಡರಲ್ಲ. ಹಾಗಾಗಿ ಪಾಸ್-ಫೇಲ್ ಎಂಬುದು ಜೀವನದ ಒಂದು ಭಾಗ ಅಷ್ಟೇ. ಫೇಲ್ (Fail) ಆದ ಕೂಡಲೇ ಯಾವುದೇ ಕಾರಣಕ್ಕೂ ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಬೇಡ. ನಿಮ್ಮ ಭವಿಷ್ಯ(Future) ಇನ್ನೂ ಸಾಕಷ್ಟಿದೆ ಈ ಕುರಿತು ಮಾನಸಿಕ ಆರೋಗ್ಯ ತಜ್ಞರಾದ(Psychiatrist) ಡಾ. ವಿನಯ್ ಅವರು ತಿಳಿಸಿರುವ ಮಾಹಿತಿ ಇಲ್ಲಿದೆ.

ಆತುರದ ನಿರ್ಧಾರ ಬೇಡ : ಹೌದು, ಪರೀಕ್ಷೆ ಎಂದಿಗೂ ನಮ್ಮ ಜೀವನ ನಿರ್ಧಾರ ಮಾಡುವುದಿಲ್ಲ. ಫೇಲ್ ಆದವರು ಕೂಡ ಜೀವನದಲ್ಲಿ ಸಾಧನೆ ಮಾಡಿದ್ದಾರೆ. ಹಾಗಾಗಿ ಪರೀಕ್ಷೆಯ ಫಲಿತಾಂಶ ಬಂದ ನಂತರದಲ್ಲಿ ಎಂದಿಗೂ ನಾವುಗಳು ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡವೇ ಬೇಡ. ನನ್ನ ಜೀವನ ಮುಗಿಯಿತು ಈ ತರಹದ ನಿರ್ಧಾರಗಳನ್ನ ಎಂದಿಗೂ ದಯವಿಟ್ಟು ತೆಗೆದುಕೊಳ್ಳಬೇಡಿ ಎಂದು ಖ್ಯಾತ ಮಾನಸಿಕ ತಜ್ಞರಾದ ಡಾ. ವಿನಯ್ ಅವ್ರು ತಿಳಿಸುತ್ತಾರೆ.

ಪೋಷಕರ ಪಾತ್ರ ಮುಖ್ಯ! : ಪರೀಕ್ಷೆ ಹಾಗೂ ಪರೀಕ್ಷೆಯ ನಂತರದಲ್ಲಿ ಮಕ್ಕಳ ಅಂಕಗಳ ವಿಚಾರ, ಮಕ್ಕಳು ಫೇಲ್ ಆದಾಗ ಅವರನ್ನು ಪೋಷಕರ ಮಾತು, ಪ್ರೋತ್ಸಾಹವೂ ಮುಖ್ಯವಾಗುತ್ತದೆ. ಕಡಿಮೆ ಅಂಕ ಗಳಿಸಿದ್ದಕ್ಕಾಗಿ, ಫೇಲ್‌ ಆದ ಕಾರಣಕ್ಕಾಗಿ ಮಕ್ಕಳನ್ನ ದೂಷಿಸದೇ ಪೋಷಕರು ಅವರು ಜೊತೆಗಿದ್ದು ಆತ್ಮವಿಶ್ವಾಸ ತುಂಬುವುದು ಮುಖ್ಯ.
  • ಅಂತರ್ಜಾಲ ಮಾಹಿತಿ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದಾಖಲೆ ಉದ್ಯೋಗ ಸೃಷ್ಟಿ – 2.04 ಕೋಟಿ ಮಾನವ ದಿನಗಳ ಕೆಲಸ

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…

5 hours ago

ಹವಾಮಾನ ವರದಿ | 14-10-2026 | ಕರ್ನಾಟಕಕ್ಕೆ ಹಿಂಗಾರು ಮಳೆ ಪ್ರವೇಶದ ಸೂಚನೆ – ಅ.16ರಿಂದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಅ.15ರಿಂದ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳಿದ್ದು, ಅ.16ರಿಂದ ಕರಾವಳಿ ಹಾಗೂ ಉತ್ತರ…

1 day ago

ರಸ್ತೆ ಬದಿಯಲ್ಲಿ ಕಸ ಎಸೆಯುವವರೇ, ಒಮ್ಮೆ ಇವರನ್ನು ನೋಡಿ…! – 5 ದಿನಗಳಲ್ಲಿ ಕಂಡ ಭಯಾನಕ ವಾಸ್ತವ

ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…

2 days ago

ಸುಳ್ಯದಲ್ಲಿ ಅ.19 ರಂದು ಪ್ರಶಾಂತಿ ಡೆಂಟಲ್ ಕ್ಲಿನಿಕ್ ಉದ್ಘಾಟನೆ

ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…

2 days ago