ಇನ್ನೂ ಬಾರದ ಮಳೆ… | ಬರಗಾಲದ ಹೊಡೆತಕ್ಕೆ ಹಾವೇರಿಯ ಅಡಿಕೆ ಬೆಳೆಗಾರರು ಕಂಗಾಲು |

May 29, 2024
12:35 PM

ಕಳೆದ ಬಾರಿ ಮುಂಗಾರು(Mansoon) ಕೈಕೊಟ್ಟ ಹಿನ್ನೆಲೆ ರಾಜ್ಯಾದ್ಯಂತ ಭೀಕರ ಬರ(Drought) ತಲೆದೋರಿದೆ. ಕೆಲವು ಕಡೆ ಪೂರ್ವ ಮುಂಗಾರು ಮಳೆ(Pre Mansoon rain) ಸುರಿದ ಕಾರಣ ರೈತರು(Farmers) ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಕೆಲ ಜಿಲ್ಲೆಗಳಲ್ಲಿ ಮಳೆಯ(Rain) ಸುಳಿವೇ ಇಲ್ಲ. ನೀರಿಗಾಗಿ ಜನ ಪರದಾಡುತ್ತಿದ್ದಾರೆ. ಅದರಲ್ಲೂ ರೈತರ ಪಾಡು ಹೇಳತೀರದು. ಹಾವೇರಿ ಜಿಲ್ಲೆಯಲ್ಲಿ ಅಡಿಕೆ ಬೆಳೆ(Areca crop) ನಂಬಿದ್ದ ರೈತರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ತಲೆದೋರಿದೆ. ಕಳೆದ ವರ್ಷ ಬಂದಪ್ಪಳಿಸಿದ ಭೀಕರ ಬರಗಾಲದಿಂದ(Drought Effect) ಅಡಿಕೆ ತೋಟಗಳು ಒಣಗಿವೆ. ಕೊಳವೆ ಬಾವಿಗಳಲ್ಲಿ ನೀರು ಖಾಲಿಯಾಗಿದೆ. ಇತ್ತ ಹಾವೇರಿ, ರಾಣೆಬೆನ್ನೂರು ತಾಲೂಕಿನ ರೈತರು ಸಂಕಷ್ಟದಲ್ಲಿದ್ದಾರೆ.

ಹಾವೇರಿ ಕೃಷಿಕರಿಗೆ ಮೊದಲಿನಿಂದಲೂ ಅಡಿಕೆ ಬೆಳೆ ಬೆಳೆಯುವ ಆಸೆ. ಅದರಲ್ಲೂ ಶಿರಸಿ, ಬನವಾಸಿ ಸೇರಿದಂತೆ ಪಶ್ಚಿಮ ಘಟ್ಟಗಳಲ್ಲಿನ ಅಡಿಕೆ ತೋಟಗಳನ್ನು ನೋಡುತ್ತಿದ್ದ ಅವರಿಗೆ ತಮ್ಮ ಜಿಲ್ಲೆಯಲ್ಲೂ ಅಡಿಕೆ ಬೆಳೆಯುವ ಹಂಬಲವಿತ್ತು. ಅದರಲ್ಲೂ ಅಡಿಕೆಗೆ ಚಿನ್ನದ ಬೆಲೆ ಬಂದ ಮೇಲಂತೂ ಹಾವೇರಿಯ ರೈತರು ಅಡಿಕೆ ಗಿಡಗಳನ್ನು ನೆಟ್ಟು ತೋಟ ಮಾಡಲಾರಂಭಿಸಿದರು. ಈ ಪ್ರಯತ್ನದಲ್ಲಿ ಸಾಕಷ್ಟು ಮಂದಿ ಯಶಸ್ವಿಯೂ ಆದರು. ತೋಟ ಮಾಡಿ ಆರು ವರ್ಷಕ್ಕೆ ಇಳುವರಿ ಪಡೆಯಲಾರಂಭಿಸಿದರು. 8,000 ಹೆಕ್ಟೇರ್​ ಇದ್ದ ಅಡಿಕೆ ತೋಟಗಳ ವಿಸ್ತೀರ್ಣ ಮೂರು ವರ್ಷಗಳಲ್ಲೇ 14 ಸಾವಿರ ಹೆಕ್ಟೇರ್‌ ತಲುಪಿತ್ತು.

ರಾಜ್ಯ ಸರ್ಕಾರ ಮಲೆನಾಡು ಅಭಿವೃದ್ಧಿ ನಿಗಮಕ್ಕೆ ಬರುವ ಹಾವೇರಿ ಜಿಲ್ಲೆಯ ಹಿರೇಕೆರೂರು, ಶಿಗ್ಗಾಂವ್, ಸವಣೂರು, ಬ್ಯಾಡಗಿ ಮತ್ತು ಹಾನಗಲ್ ತಾಲೂಕುಗಳ ರೈತರಿಗೆ ನರೇಗಾ ಯೋಜನೆಯಲ್ಲಿ ಹಣ ನೀಡಿತು. ಆದರೆ ರಾಣೆಬೆನ್ನೂರು ತಾಲೂಕುಗಳ ಅಡಿಕೆ ರೈತರಿಗೆ ಬಯಲುಸೀಮೆ ಎಂಬ ಕಾರಣಕ್ಕೆ ಸಬ್ಸಿಡಿ ಸಿಗಲಿಲ್ಲ. ಹೀಗಿದ್ದರೂ ತಾಲೂಕಿನಲ್ಲಿ ಅಡಿಕೆ ಬೆಳೆಯುವವರ ಸಂಖ್ಯೆ ಕಡಿಮೆಯಾಗಿಲ್ಲ. ಕೊಳವೆ ಬಾವಿ ನೀರಿನ ಲಭ್ಯತೆ ಮೇಲೆ ತಮಗಿರುವ ಜಮೀನಿನಲ್ಲಿ ಎಕರೆಗೆ 600-700 ಅಡಿಕೆ ಗಿಡ ನೆಟ್ಟು ಬೆಳೆಸಿ ಈ ವರ್ಷ ಕೈತುಂಬಾ ಫಸಲಿನ ಕನಸು ಕಂಡಿದ್ದರು.

ಆದರೆ, ಬರ ಬಂದಪ್ಪಳಿಸಿ ತೋಟಗಳು ಒಣಗಿವೆ. ಕೊಳವೆ ಬಾವಿಗಳಲ್ಲಿ ನೀರು ಖಾಲಿಯಾಗಿದೆ. ಆರಂಭದಲ್ಲಿ ಅಕ್ಕಪಕ್ಕದ ಜಮೀನುಗಳ ರೈತರ ಕೊಳವೆಬಾವಿ ಸಹಾಯದಿಂದ ನೀರುಣಿಸುತ್ತಿದ್ದರು. ಇದೀಗ ನೀರು ನೀಡುತ್ತಿರುವ ರೈತರ ಕೊಳವೆಬಾವಿಗಳಲ್ಲೇ ನೀರಿಲ್ಲ. ಹಾಗಾಗಿ, ಅವರು ತಮ್ಮ ಅಡಿಕೆ ಬೆಳೆ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ.

  • ಅಂತರ್ಜಾಲ ಮಾಹಿತಿ
ಪ್ರತಿಕ್ರಿಯಿಸಲು....
ಈ ಕೆಳಗಿನ ಲಿಂಕ್‌ ಮೂಲಕ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು…

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!
March 24, 2026
12:24 PM
by: ಸಾಯಿಶೇಖರ್ ಕರಿಕಳ
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ
March 24, 2026
7:12 AM
by: ಮಿರರ್‌ ಡೆಸ್ಕ್
ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ
March 23, 2026
10:18 PM
by: ದ ರೂರಲ್ ಮಿರರ್.ಕಾಂ
ನೆಮ್ಮದಿಗಾಗಿ ಬದುಕಿ; ಹಣ-ಅಧಿಕಾರಕ್ಕಾಗಿ ಅಲ್ಲ
March 23, 2026
9:12 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror