ಪುತ್ತೂರು: ಹಲಸು ಸಾರ ಮೇಳ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಜೂ.15 ಹಾಗೂ 16 ರಂದು ನಡೆಯಲಿದೆ. ಈ ಮೇಳಕ್ಕೆ 40 ಕ್ಕೂ ಅಧಿಕ ಮಳಿಗೆಗಳು ಬರಲಿದ್ದು ಅದರಲ್ಲಿ 30 ಕ್ಕೂ ಅಧಿಕ ಹಲಸಿನ ಉತ್ಪನ್ನಗಳದ್ದೇ ಕಂಡುಬರಲಿದೆ. ಈ ಬಾರಿಯ ಮೇಳದಲ್ಲಿ ಹಲಸು ಹಪ್ಪಳದ ಚಾಟ್ ಹಾಗೂ ಹಲಸು ಕೇಸರಿಬಾತ್ ವಿಶೇಷವಾಗಿ ಕಾಣಲಿದೆ.
ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಹಲಸು ಸ್ನೇಹ ಸಂಗಮ ಹಾಗೂ ಐಐಎಚ್‍ಆರ್ ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸೇರಿದಂತೆ ಪುತ್ತೂರು ಜೇಸಿಐ ಮನತ್ತು ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಹಲಸು ಸಾರ ಮೇಳ ನಡೆಯಲಿದೆ. ಕಳೆದ ಬಾರಿ ಹಲಸು ಮೇಳ ಯಶಸ್ವಿಯಾಗಿ ನಡೆದಿತ್ತು. ಈ ಬಾರಿ ಕೂಡಾ ಅದೇ ಮಾದರಿಯಲ್ಲಿ ಮೇಳ ನಡೆಯಲಿದೆ. ಈ ಬಾರಿ 40 ಕ್ಕೂ ಅಧಿಕ ಮಳಿಗೆ ಬರಲಿದ್ದು ಅದರಲ್ಲಿ ಹಲಸಿನ ಮಳಿಗೆಗಳೇ 30 ಕ್ಕಿಂತ ಹೆಚ್ಚು ಬರಲಿದೆ. ಕಲರ್ ಬಳಕೆ ಕಡಿಮೆ ಇರುವ ವಸ್ತುಗಳನ್ನೇ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಮೇಳದಲ್ಲಿ ವಿಶೇಷವಾಗಿ ಹಲಸಿನ ಕಾಯಿ ಹಾಗೂ ಹಣ್ಣಿನ ದೋಸೆ, ಹಲಸಿನ ಬೀಜದ ಹೊಳಿಗೆ, ಹಲಸಿನ ಹಣ್ಣಿನ ಹಲ್ವ, ಹಲಸಿನ ಹಪ್ಪಳ ಚಾಟ್, ಗುಜ್ಜೆ ಮಂಚೂರಿ, ಕಬಾಬ್, ಹಲಸು ರೋಸ್ಟ್ , ಪಲಾವ್, ಪೋಡಿ, ಹಲಸಿನ ಬೀಜದ ಅಂಬೊಡೆ, ಹಲಸಿನಕಾಯಿ ಅಂಬೊಡೆ, ಹಲಸಿನಬೀಜದ ಜಾಮೂನ್ , ಹಲಸಿನಬೀಜದ ಬಿಸ್ಕೆಟ್ , ಇನ್ಟಂಟ್ ರಸಂ ಪೌಡರ್, ಹಲಸಿನಹಣ್ಣಿನ ಕೇಸರಿಬಾತ್ , ಕಲರ್ ರಹಿತ ಹಲಸಿನಹಪ್ಪಳ, ತೆಂಗಿನ ಎಣ್ಣೆಯಲ್ಲಿ ಕರಿದ ಹಲಸಿನ ಚಿಪ್ಸ್, ಹಲಸಿನ ಬೀಜದ ಬಿಸ್ಕೆಟ್ , ಉಪ್ಪುಸೊಳೆ ವಡೆ ಹಲಸಿನ ಐಸ್ ಕ್ರೀಂ , ಕ್ಯಾಂಡಿ, ಹಲಸಿನ ಬೀಜದ ಪತ್ರೊಡೆ, ಪಾಯಸ, ಗಟ್ಟಿ, ಕಡುಬು, ಹಲಸಿನ ಬೀಜದ ಬರ್ಫಿ, ಹಲಸಿನ ಹಲ್ವಾ ಮೇಳದಲ್ಲಿ ಸಿಗಲಿದೆ. ಇದರ ಜೊತೆಗೆ ಹಲಸು ಬಗ್ಗೆ ಮಾತುಕತೆ , ಗೋಷ್ಟಿಗಳು ನಡೆಯಲಿದೆ.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…