ಶುಕ್ರವಾರ ಅಹಮದಾಬಾದ್‌ನಿಂದ ಗಾಂಧಿನಗರಕ್ಕೆ ತೆರಳುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ಪಡೆ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಲು ಸ್ವಲ್ಪ ಹೊತ್ತು ನಿಂತಿತು. ಇದೀಗ ಈ ವಿಡಿಯೋ ವೈರಲ್ ಆಗಿದೆ.
ಗುಜರಾತ್ ಬಿಜೆಪಿ ಮತ್ತುಸುದ್ದಿ ಸಂಸ್ಥೆ ಎಎನ್‌ಐ ಹಂಚಿಕೊಂಡ ವೀಡಿಯೊ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ಪಡೆಯ ಭಾಗವಾಗಿದ್ದ ಎರಡು ಕಾರುಗಳು ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಲು ಅಹಮದಾಬಾದ್-ಗಾಂಧಿನಗರ ರಸ್ತೆಯಲ್ಲಿ ನಿಧಾನವಾಗಿ ಎಡಭಾಗಕ್ಕೆ ಚಲಿಸಿದೆ. ಅಹಮದಾಬಾದ್‌ನಲ್ಲಿ ಸಾರ್ವಜನಿಕ ರಾಲಿಯಲ್ಲಿ ಭಾಗವಹಿಸಿದ ಪ್ರಧಾನಿಗಳು ಅವರು ಅಲ್ಲಿಂದ ಗಾಂಧಿನಗರದ ರಾಜಭವನದತ್ತ ಹೊರಟಿದ್ದರು. ಎಲ್ಲ ವಾಹನಗಳ ಸಂಚಾರ ಸ್ಥಗಿತಗೊಳಿಸಿ ಪ್ರಧಾನಿಗಳ ವಾಹನಕ್ಕೆ ದಾರಿ ಮಾಡಿ ಕೊಡಲಾಗಿತ್ತು. ಈ ವೇಳೆ ಆಂಬುಲೆನ್ಸ್ ಒಂದು ಬಂದಿದ್ದು, ಅದಕ್ಕೆ ಪ್ರಧಾನಿ ಅವರ ರಕ್ಷಣೆಗಿದ್ದ ವಾಹನಗಳು ದಾರಿ ಮಾಡಿಕೊಟ್ಟಿವೆ.
Prime Minister Narendra Modi, on route from Ahmedabad to Gandhinagar. stopped his convoy to give way to an ambulance #gandhinagara #NarendraModi #Gujarat pic.twitter.com/haGaE3KjP4
— theruralmirror (@ruralmirror) September 30, 2022
Advertisement
ಅಹಮದಾಬಾದ್‌ನಿಂದ ಗಾಂಧಿನಗರಕ್ಕೆ ಹೋಗುವ ಮಾರ್ಗದಲ್ಲಿ, ಅಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಲು ಪ್ರಧಾನಿ ಮೋದಿಯವರ ವಾಹನವನ್ನು ನಿಲ್ಲಿಸಲಾಯಿತು” ಎಂದು ಗುಜರಾತ್ ಬಿಜೆಪಿ ಹೇಳಿಕೆಯಲ್ಲಿ ತಿಳಿಸಿದೆ. ಗುಜರಾತ್ ಭೇಟಿಯ ಎರಡನೇ ದಿನದಂದು, ಪ್ರಧಾನಿ ಮೋದಿ ಅವರು ಗಾಂಧಿನಗರ-ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದ್ದರು ಮತ್ತು ಅಹಮದಾಬಾದ್ ಮೆಟ್ರೋ ರೈಲು ಯೋಜನೆಗೆ ಮೊದಲ ಹಂತದ ಚಾಲನೆ ನೀಡಿದರು.